ಚೆನ್ನೈ: ಮೇಲ್ಚಾವಣಿ ತೆರೆದು ಮನೆಯೊಳಕ್ಕೆ ನುಗ್ಗಿದ ಮಂಗವೊಂದು 8 ತಿಂಗಳ ಮಗುವನ್ನು ಎಳೆದೊಯ್ದ ಘಟನೆ ತಮಿಳುನಾಡಿನ ತಂಜಾಪೂರಿನಲ್ಲಿ ನಡೆದಿದೆ.
ಮಂಗ ಎತ್ತಿಕೊಂಡು ಹೋಗುವಾಗ ಮಗು ಅಳಲು ಪ್ರಾರಂಭಿಸಿದೆ. ಇದನ್ನು ಕೇಳಿ ತಾಯಿದ ಓಡಿಬಂದಿದ್ದಾರೆ. ಅದಾಗಲೇ ಮಗುವನ್ನು ಎತ್ತಿಕೊಂಡು ಮಂಗ ಪರಾರಿಯಾಗಿತ್ತು. ತಾಯಿ ಜೋರಾಗಿ ಅಳಲು ಪ್ರಾರಂಭಿಸಿದ್ದಾಳೆ. ಅಕ್ಕಪಕ್ಕದವರು ಬಂದು ಜೋರಾಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಭಯಗೊಂಡಿರುವ ಮಂಗ ಮಗುವನ್ನು ಅಲ್ಲಿಯೇ ಎಸೆದು ಹೋಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಲು ಪೋಷಕರು, ಸ್ಥಳೀಯರು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಮಗು ಸಾವನ್ನಪ್ಪಿತ್ತು. ಈ ಘಟನೆಯಿಂದಾಗಿ ತಂಜಾಪೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
PublicNext
14/02/2021 07:57 pm