ಗಾಂಧಿನಗರ: ಪತಿಯ ಕಾಮದಾಹಕ್ಕೆ ಬೇಸತ್ತ ಮಹಿಳೆಯೊಬ್ಬರು 18 ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಅಹಮದಾಬಾದ್ನ ಘಟ್ಲೋಡಿಯಾ ನಿವಾಸಿ ಹರ್ಷಾ ಪಟೇಲ್ (39) ಆತ್ಮಹತ್ಯೆಗೆ ಶರಣಾದ ಮಹಿಳೆ. ಕಳೆದ ವರ್ಷ ಹರ್ಷಾ ಮೂಳೆ ವೈದ್ಯ ಹಿತೇಂದ್ರ ಪಟೇಲ್ ಜೊತೆಗೆ ಮದುವೆಯಾಗಿದ್ದರು. ಇದು ಇಬ್ಬರ ಎರಡನೇ ಮದುವೆಯಾಗಿತ್ತು. ಆದರೆ ಕಳೆದ ಮಂಗಳವಾರ ಹರ್ಷಾ ಪತ್ನಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ 18 ಪುಟಗಳ ಡೆತ್ನೋಟ್ ಸಿಕ್ಕಿದೆ. ಇದರಲ್ಲಿ ಹರ್ಷಾ ತನ್ನ ಪತಿ ಮತ್ತು ಅತ್ತೆ-ಮಾವನ ಕೃತ್ಯವನ್ನು ತಿಳಿಸಿದ್ದಾರೆ. ಅತ್ತೆ-ಮಾವ ವರದಕ್ಷಿಣೆ ತರುವಂತೆ ಕಿರುಕುಳ ಕೊಡಲು ಆರಂಭಿಸಿದರಂತೆ. ಇತ್ತ ಪತಿ ಪ್ರತಿ ದಿನ ರಾತ್ರಿ ಮಾದಕ ವಸ್ತು ಇಂಜೆಕ್ಷನ್ ನೀಡುತ್ತಿದ್ದನಂತೆ. ಅಷ್ಟೇ ಅಲ್ಲದೆ ಬಲವಂತವಾಗಿ ಆಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದನಂತೆ ಎಂದು ತಿಳಿಸಲಾಗಿದೆ.
ಪತಿಯ ಲೈಂಗಿಕ ಕಿರುಕುಳದಿಂದ ಹರ್ಷಾ ಕಳೆದ ಡಿಸೆಂಬರ್ನಲ್ಲಿ ತವರಿಗೆ ತೆರಳಿದ್ದಳು. ಆದರೆ ಕಳೆದ ಮಂಗಳವಾರ ಪತಿಯ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹಿತೇಂದ್ರ, ಆತನ ತಂದೆ-ತಾಯಿ ಮತ್ತು ಸಹೋದರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಅಸಹಜ ಲೈಂಗಿಕ ಕ್ರಿಯೆ ಮತ್ತು ಬಲವಂತವಾಗಿ ಡ್ರಗ್ಸ್ ನೀಡಿರುವ ಪ್ರಕರಣದಡಿಯಲ್ಲಿ ಕೇಸು ದಾಖಲಿಸುತ್ತಾರೆ.
PublicNext
14/02/2021 06:03 pm