ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಲ್ಲಿ ಜ.26 ರ ಘಟನೆ : ಟೂಲ್ ಕಿಟ್ ತಿರುಚಿದ ಬೆಂಗಳೂರಿನ ದಿಶಾ ಬಂಧನ

ಹೊಸದಿಲ್ಲಿ : ಗಣರಾಜ್ಯೋತ್ಸವದಂದು ರೈತರ ಭಾರಿ ಪ್ರತಿಭಟನೆ, ಹಿಂಸಾಚಾರ ಹಾಗೂ ಕೆಂಪು ಕೋಟೆ ಮೇಲೆ ವಿವಾದಿತ ಧ್ವಜಾರೋಹಣ ಹಾಗೂ ಐತಿಹಾಸಿಕ ಸ್ಮಾರಕಗಳ ಧ್ವಂಸಕ್ಕೆ ಪರಿಸರ ಹೋರಾಟಗಾರ್ತಿ ಗ್ರೇಟ್ ಥನ್ ಬರ್ಗ್ ವಿವಾದಾತ್ಮಕ ಟೂಲ್ ಕಿಟ್ ಕಾರಣ. ಆದರೆ ಆಘಾತಕಾರಿ ಸಂಗತಿ ಎಂದರೆ ಥನ್ ಬರ್ಗ್ ಟೂಲ್ ಕಿಟ್ ತಿರುಚಿ ಪ್ರಚೋದನಕಾರಿ ಆಂಶ ಸೇರಿಸಿದ್ದು ಬೆಂಗಳೂರಿನ ದಿಶಾ ರವಿ ಎಂಬ ಮಹಿಳೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ದುಷ್ಕೃತ್ಯಕ್ಕಾಗಿ ದಿಲ್ಲಿ ಸ್ಪೇಶಲ್ ಸೆಲ್ ಪೊಲೀಸರು 21 ವರ್ಷದ ದಿಶಾ ರವಿಯನ್ನು ಬೆಂಗಳೂರಲ್ಲಿ ಬಂಧಿಸಿದ್ದಾರೆ. ದಿಶಾ ಈ ಪ್ರಕರಣದ ಪಮುಖ ಕೊಂಡಿಯಾಗಿದ್ದು, ಮೂಲ ಟೂಲ್ ಕಿಟ್ ದಲ್ಲಿಯ ಕೆಲವು ಆಂಶಗಳನ್ನು ಕಟ್ ಮಾಡಿ ತನ್ನದೇಯಾದ ವಿಚಾರಗಳನ್ನು ಅದರಲ್ಲಿ ಸೇರಿಸಿದ್ದಾಗಿ ವಿಚಾರಣೆ ಸಂದರ್ಭದಲ್ಲಿ ದಿಶಾ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು ಇನ್ನೂ ಕೆಲವು ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

14/02/2021 01:00 pm

Cinque Terre

97.08 K

Cinque Terre

8

ಸಂಬಂಧಿತ ಸುದ್ದಿ