ಬೆಂಗಳೂರು: ಡಿಡಿಗಳನ್ನ ಬ್ಯಾಂಕ್ ನಲ್ಲಿ ಕೊಟ್ರೆ ಹಣ ಬರಲು ಮೂರು ದಿನವಾದರು ಕಾಯ್ಬೇಕು. ಅರ್ಜೆಂಟ್ ಹಣ ಬೇಕು ಅನ್ನೋರನ್ನೆ ಬಂಡವಾಳ ಮಾಡಿಕೊಂಡ ಕೆಲವರು ಕಮಿಷನ್ ಮೇಲೆ ಸ್ಪಾಟ್ ಹಣ ಕೊಟ್ಟು ಡಿಡಿ, ಚೆಕ್ ಪಡಿತಾರೆ.
ಅಂತಹ ಕಮಿಷನ್ ಗಿರಾಕಿಗಳನ್ನೆ ಯಾಮಾರಿಸಲು ಹೊರಟಿತ್ತು ಈ ಖತರ್ನಾಕ್ ದಂಪತಿ . 349 ರೂ ಗಳ ಅಸಲಿ ಡಿಡಿ ಪಡೆದು ಅದನ್ನು ನಕಲು ಮಾಡಿ ಅರ್ದ ಹಣಕ್ಕೆ ಕೊಡಲು ಹೊರಟಿತ್ತು ಈ ಜೋಡಿ. ಅರ್ಜೆಂಟ್ ಹಣ ಬೇಕಾದ್ರೆ ಚೆಕ್ ನೀಡಿ ಕಮಿಷನ್ ಮೇಲೆ ಹಣ ಕೊಡುವವರು ಇದ್ದಾರೆ. ಅಂತವರನ್ನೆ ಮರಳು ಮಾಡಿ ಲಕ್ಷ ಲಕ್ಷ ಪೀಕಲು ರೆಡಿಯಾಗಿದ್ದರು ಈ ದಂಪತಿ. ಅಸಲಿ ಡಿಡಿಯ ತಲೆ ಮೇಲೆ ಹೊಡೆದು ನಕಲಿ ಮಾಡಿದವರ ಕ್ರೈಂ ಕಹಾನಿ ಇದು.
ಆರೋಪಿಗಳ ಜಾಡು ಹಿಡಿದ ಬೇಗೂರು ಪೊಲೀಸರು ಏಳು ಕೋಟಿ ಹದಿನೆಂಟು ಲಕ್ಷದ ನಕಲಿ ಡಿಡಿ ಜೊತೆ ಖತರ್ನಾಕ್ ಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ಏನು ಅರಿಯದವರ ರೀತಿ ಇರೋ ಇವ್ರಿಬ್ರು ಗಂಡ ಹೆಂಡತಿ. ಗಂಡ ಇಂದ್ರಜಿತ್ ಹೆಂಡತಿ ಮಂಜುಳ, ಇವ್ರಿಗೆ ಸಾಥ್ ಕೊಟ್ಟ ಸ್ನೇಹಿತರು ಮುನಿರಾಜು ಮತ್ತು ಆನಂದ. ಈ ನಾಲ್ಕು ಜನ ಸೇರಿ 349 ರೂ ಗಳ ಅಸಲಿ ಡಿಡಿ ತಂದು ಅದನ್ನ ಅಳಿಸಿ ಎಷ್ಟು ಬೇಕೊ ಅಷ್ಟನ್ನು ಪ್ರಿಂಟ್ ಮಾಡ್ತಿದ್ರು. ನಂತರ ಮಂಜುಳಾ ಅದನ್ನು ತೀರಾ ಅರ್ಜೆಂಟ್ ಇದೆ ಒಂದು ಲಕ್ಷದ ಡಿಡಿಗೆ ಐವತ್ತು ಸಾವಿರ ಕೊಡಿ ಎಂದು ಯಾಮಾರಿಸಿ ಹಣ ಮಾಡಲು ಹೊರಟಿದ್ರು. ಆದ್ರೆ ಅವ್ರ ಪ್ಲಾನ್ ಕೈ ಕೊಟ್ಟಿದೆ. ಮೊದಲ ಅಟೆಂಪ್ಟ್ ನಲ್ಲೆ ಬೇಗೂರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಈಗಾಗಲೇ ಲ್ಯಾಪ್ ಟಾಪ್, ಕೋಟಿ ಕೋಟಿ ಮೌಲ್ಯದ ನಕಲಿ ಡಿಡಿ, ಪ್ರಿಂಟರ್ ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
PublicNext
11/02/2021 01:46 pm