ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆತ್ ನೋಟ್ ಬರೆದಿಟ್ಟು ಸಾರಿಗೆ ನೌಕರ ಆತ್ಮಹತ್ಯೆ

ಮಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆಂದು ಡೆತ್ ನೋಟ್ ಬರೆದಿಟ್ಟು ಸಾರಿಗೆ ನೌಕರರೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಶರಣಾದವರನ್ನು ಬಾಲಕೃಷ್ಣ ಎಂದು ಗುರುತಿಸಲಾಗಿದ್ದು, ಇವರು ಮಂಗಳೂರಿನ ಬಿ.ಸಿರೋಡ್ ಕೆಎಸ್‌ಆರ್‌ಟಿಸಿ ಡಿಪೋ ಭದ್ರತಾ ವಿಭಾಗದಲ್ಲಿ ಕರ್ತವ್ಯದಲ್ಲಿದ್ದರು.

ಮಂಗಳೂರು ಹೊರವಲಯದ ತೊಕ್ಕೊಟ್ಟುವಿನ ರೈಲ್ವೇ ಬ್ರಿಡ್ಜ್ ನಿಂದ ನೇತ್ರಾವತಿ ನದಿಗೆ ಹಾರಿ ಬಾಲಕೃಷ್ಣ ಸೂಸೈಡ್ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮೊದಲು ಡೆತ್‍ನೋಟ್ ಬರೆದಿಟ್ಟಿದ್ದ ಬಾಲಕೃಷ್ಣ, ಸಂಸ್ಥೆ ನನ್ನನ್ನು ಬದುಕಲು ಬಿಡುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಕೌಟುಂಬಿಕ ಕಲಹದ ಬಗ್ಗೆಯೂ ಬರೆದಿರುವ ಅವರು, ತನ್ನ ಸಹೋದರನ ವಿರುದ್ಧವು ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಈ ಆತ್ಮಹತ್ಯೆಗೆ ಕೌಟುಂಬಿಕ ಕಲಹವೂ ಕಾರಣ ಎನ್ನಲಾಗಿದೆ.

Edited By : Nagaraj Tulugeri
PublicNext

PublicNext

11/02/2021 08:29 am

Cinque Terre

89.91 K

Cinque Terre

6

ಸಂಬಂಧಿತ ಸುದ್ದಿ