ಶಿವಮೊಗ್ಗ: 2 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ, ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗಾಡಿಕೊಪ್ಪ ಬಡಾವಣೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಗೃಹಿಣಿ ಮೋನಿಕಾ (21) ಆಗಿದ್ದಾಳೆ.
ಈಕೆ ಚಂದನ್ ಎಂಬಾತನನ್ನು 2 ವರ್ಷಗಳ ಕಾಲ ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಮದುವೆಯಾಗಿ ಒಂದೂವರೆ ವರ್ಷದೊಳಗೆ ನೇಣು ಬಿಗಿದು ಕೊಂಡು ಸಾವನ್ನಪ್ಪಿದ್ದಾಳೆ.ಪ್ರೀತಿಸಿ ವಿವಾಹವಾಗಿದ್ದ ಮೋನಿಕಾ ಹಾಗೂ ಚಂದನ್ ಗಾಡಿಕೊಪ್ಪ ಬಡಾವಣೆಯಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ವಿವಾಹವಾದ ಆರಂಭದ ಮೂರು – ನಾಲ್ಕು ತಿಂಗಳು ಇಬ್ಬರು ಅನ್ಯೋನ್ಯವಾಗಿದ್ದರು.
PublicNext
11/02/2021 07:32 am