ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಪೊಲೀಸ್ ಗುಂಡಿನ ಸದ್ದು ಕೇಳಿದೆ. ರೌಡಿಶೀಟರ್ ಕಾಲಿಗೆ ಶೂಟೌಟ್ ಮಾಡಿದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಜಿಕೆಡಬ್ಲ್ಯೂ ಲೇಔಟ್ ನಲ್ಲಿ ರೌಡಿ ಶೀಟರ್ ಸಂತೋಷ್ ಅಲಿಯಾಸ್ ಇಲಿಕುಟ್ಟಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ, ಬಂಧಿಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀನಿವಾಸ್ ಎಂಬಾತನ ಬರ್ಬರ ಕೊಲೆ ಮಾಡಿದ್ದ ಈತ ಪೋಲಿಸರಿಗೆ ಬೇಕಾಗಿದ್ದ.
ಈ ಪ್ರಕರಣ ಸಂಬಂಧಿಸಿದಂತೆ ಬಂಧನಕ್ಕೆ ತೆರಳಿದಾಗ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಸಂತೋಷ್ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತ್ಮ ರಕ್ಷಣೆಗಾಗಿ ರಾಜಗೋಪಾಲ ನಗರ ಪಿಎಸ್ಐ ಹನುಮಂತ ಹಾದಿಮನಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಲೆಗೆ ಕೆಡವಿದ್ದಾರೆ.
PublicNext
09/02/2021 02:58 pm