ಬನಸ್ಕಂತ (ಗುಜರಾತ್) : 60 ಲಕ್ಷ ರೂಪಾಯಿಗಳ ಇನ್ಸುರೆನ್ಸ್ ಮೊತ್ತ ಬರುತ್ತದೆಂಬ ಆಸೆಗಾಗಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಪಾಪಿ ಗಂಡನೊಬ್ಬ, ತನ್ನ ಪತ್ನಿಯನ್ನು ಅಪಘಾತದ ಮೂಲಕ ಕೊಲೆ ಮಾಡಿಸಿರುವ ವಿಲಕ್ಷಣ ಘಟನೆ ಗುಜರಾತ್ನ ಬನಸ್ಕಂತ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕಳೆದ ವರ್ಷ ಡಿಸೆಂಬರ್ 26 ರಂದು ರಸ್ತೆ ಅಪಘಾತದಲ್ಲಿ ದಕ್ಷಬೆನ್ ಎಂದು ಗುರುತಿಸಲ್ಪಟ್ಟ ಮಹಿಳೆ ಸಾವನ್ನಪ್ಪಿದ್ದರು. ಈ ಬಗ್ಗೆ ಭಿಲ್ಡಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಮಹಿಳೆಯ ಸಂಬಂಧಿಕರು ಸಾವಿನ ಬಗ್ಗೆ ಕೆಲವು ಅನುಮಾನ ವ್ಯಕ್ತಪಡಿಸಿದ್ದರಿಂದ ನಾವು ಆಳವಾದ ತನಿಖೆ ಪ್ರಾರಂಭಿಸಿದೆವು. ನಂತರ ಸಿಸಿಟಿವಿ ಮತ್ತು ಮಹಿಳೆಯ ಪತಿಯ ಫೋನ್ ಕರೆಗಳನ್ನು ಪರಿಶೀಲಿಸಿದಾಗ, ಇದು ಕೊಲೆ ಪ್ರಕರಣ ಎಂಬುದು ಸ್ಪಷ್ಟವಾಗಿದೆ” ಎಂದು ಅವರು ತಿಳಿಸಿದ್ದಾರೆ.
PublicNext
08/02/2021 10:55 am