ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಡಿಗೆ ಕೊಡದೇ ಕಾಡುತ್ತಿದ್ದ ಅಂದದ ಬೆಡಗಿ ಬಂಧನ

ಬೆಂಗಳೂರು : ರಾಜಧಾನಿಯಲ್ಲಿ ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರು ಯೋಚಿಸಲೇಬೇಕಾದ ಸ್ಟೋರಿ ಇದು‌. ಬಾಡಿಗೆ ಪಡೆಯುವಾಗ ನಯವಾಗಿ ಮಾಲೀಕರೊಂದಿಗೆ ಮಾತನಾಡಿ ಅನಂತರ ಬಾಡಿಗೆ ಕೇಳಲು ಹೋದ ಮಾಲೀಕನ ಮೇಲೆಯೇ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಹೆಚ್​​ಎಎಲ್ ಪೊಲೀಸರು ಬಂಧಿಸಿದ್ದಾರೆ‌.

ಕುಂದಲಹಳ್ಳಿ ನಿವಾಸಿ ಮನೆ ಮಾಲೀಕ ವೆಂಕಟರೆಡ್ಡಿ ನೀಡಿದ ದೂರಿನ ಮೇರೆಗೆ ಭುವನಾ ಹಾಗೂ ವಿಶಾಲ್ ಎಂಬುವರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಜಸ್ಥಾನ ಮೂಲದ ಭುವನಾ ಎಂಬಾಕೆ ಕಳೆದ ಎಂಟು ವರ್ಷಗಳ ಹಿಂದೆ ಮಾರತ್‌ಹಳ್ಳಿ‌ಯಲ್ಲಿ ವೆಂಕಟರೆಡ್ಡಿ ಎಂಬುವವರಿಗೆ ಸೇರಿದ ಮನೆಯನ್ನು ಪೇಯಿಂಗ್ ಗೆಸ್ಟ್ (ಪಿಜಿ) ನಡೆಸುವುದಾಗಿ ತಿಂಗಳಿಗೆ 6 ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಬಾಡಿಗೆ ಪಡೆದಿದ್ದಳು‌.

ಪಿಜಿಯಲ್ಲಿ ಸುಮಾರು 300 ಜನರು ವಾಸವಾಗಿದ್ದರು‌‌‌. ಪ್ರಾರಂಭದಲ್ಲಿ ಬಾಡಿಗೆ ನೀಡುತ್ತಿದ್ದ ಭುವನಾ ನಂತರ ದೆಹಲಿ ಮೂಲದ ರೌಡಿ ಶೀಟರ್ ವಿಶಾಲ್ ಜೊತೆಗೂಡಿ ಇದ್ದ ಈಕೆ ಬಾಡಿಗೆ ಕೊಡದೇ ಮಾಲೀಕರಿಗೆ ಸತಾಯಿಸಿದ್ದಾಳೆ. ಬಾಡಿಗೆ ಪಡೆದಾಗಿನಿಂದ ಈವರೆಗೂ ವಿದ್ಯುತ್, ವಾಟರ್ ಬಿಲ್ ಯಾವುದೂ ಕಟ್ಟಿಲ್ಲ. 2019ರ ಡಿಸೆಂಬರ್‌ನಿಂದ 2021ರ ಫೆಬ್ರವರಿವರೆಗೆ ಸುಮಾರು ಒಂದೂವರೆ ಕೋಟಿ ಬಾಡಿಗೆ ಹಣ ನೀಡಿಲ್ಲ.

ಬಾಡಿಗೆ ಕೇಳಿದಾಗಲೆಲ್ಲ ನಿಮ್ಮ ಮೇಲೆ ರೆಪ್ ಕೇಸ್ ಹಾಕ್ತೀನಿ ಎಂಬುದಾಗಿ ಬೆದರಿಸಿದ್ದಾಳೆ ಎಂದು ಮಾಲೀಕರು ಆರೋಪಿಸಿದ್ದಾರೆ. ಬೇಸತ್ತ ಮಾಲೀಕ ಎಚ್ ಎ ಎಲ್ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ಭುವನಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

Edited By : Nagaraj Tulugeri
PublicNext

PublicNext

08/02/2021 08:05 am

Cinque Terre

113.56 K

Cinque Terre

8

ಸಂಬಂಧಿತ ಸುದ್ದಿ