ಪುದುಚೇರಿ: ಈ ಮನುಷ್ಯನಿಗೆ ಅದ್ಯಾವ ಬಂಡ ಧೈರ್ಯವೊ ಗೊತ್ತಿಲ್ಲ..ಯಾರಾದರೂ 5 ಕೋಟಿ ರೂ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಮಾಡುವುದಾಗಿ ಘೋಷಣೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಆರ್ಯಂಕುಪ್ಪಂ ಗ್ರಾಮದ ನಿವಾಸಿ 43 ವರ್ಷದ ಸತ್ಯ ಆನಂದಂ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯಾರಾದರೂ 5 ಕೋಟಿ ರೂ ಕೊಟ್ಟರೆ ಪ್ರಧಾನಿ ನರೇಂದ್ರ ಮೋದಿಯ ಹತ್ಯೆ ಮಾಡುವುದಾಗಿ ಘೋಷಣೆ ಮಾಡಿದ್ದ. ಕಾರು ಚಾಲಕನೋರ್ವ ಈ ಪೋಸ್ಟ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಖಾತೆಯ ಮೂಲ ಪರಿಶೀಲಿಸಿ ಆತನ ಜಾಡು ಪತ್ತೆ ಮಾಡಿ ಬಂಧಿಸಿದ್ದಾರೆ.
PublicNext
06/02/2021 07:36 am