ದಾವಣಗೆರೆ: ಒಂದು ಕೋಟಿ 47 ಲಕ್ಷ ರೂಪಾಯಿಯನ್ನು ದಾವಣಗೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಭರ್ಜರಿ ಕಾರ್ಯಾಚರಣೆ ನಡೆಸಿದಾರೆ.
ಭಾರೀ ಮೊತ್ತದ ಹಣ ವಶಕ್ಕೆ ಪಡೆದ ದಾವಣಗೆರೆ ಪೊಲೀಸರು, ಅಕ್ರಮವಾಗಿ ಸಾಗಿಸುತ್ತಿದ್ದ ದ್ದ 1 ಕೋಟಿ 47 ಲಕ್ಷ ರೂಪಾಯಿಯನ್ನು ಸೀಜ್ ಮಾಡಿದ್ದಾರೆ.
ಕಲಬುರಗಿಯಿಂದ ದಾವಣಗೆರೆಗೆ ಕಾರಿನಲ್ಲಿ ಸಾಗಿಸುತ್ತಿದ್ದಾಗ ದಾವಣಗೆರೆಯ ಕೆ. ಆರ್. ರಸ್ತೆಯ ಶಾದಿ ಮಾಲ್ ಬಳಿ ಕಾರು ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದೇ, ಪೊಲೀಸರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಕಾರಣ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಶ್ರೀಕಾಂತ, ಬೀರಲಿಂಗ, ಮಹೇಶ್ ಎಂಬುವವರನ್ನು ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ನಾಗೇಶ್ ಐತಾಳ್ ಭೇಟಿ ನೀಡಿದ್ದಾರೆ.ಸಿಕ್ಕ ಎಲ್ಲ ಹಣವು 500 ರೂಪಾಯಿ ನೋಟುಗಳಾಗಿವೆ. ಕಲಬುರ್ಗಿಯಿಂದ ಸಾಗಣೆ ಮಾಡಲಾಗುತ್ತಿದ್ದ ಹಣ ಯಾರಿಗೆ ಸೇರಿದ್ದು, ಕಾರಿನಲ್ಲಿ ಯಾಕೆ ಸಾಗಣೆ ಮಾಡಲಾಗುತಿತ್ತು? ಎಲ್ಲಿಗೆ ತೆಗೆದುಕೊಂಡು ಹೋಗಲಾಗುತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
05/02/2021 10:46 pm