ಗೊಂದಿಯಾ(ಮಹಾರಾಷ್ಟ್ರ): ಮಗುವಿಗೆ ಸ್ನ್ಯಾಕ್ಸ್ ತರಲು ಹೆಂಡತಿ ಹಣ ಕೇಳಿದಳೆಂಬ ಕಾರಣಕ್ಕೆ ಪಾಪಿ ಗಂಡ ತನ್ನ 20 ತಿಂಗಳ ಹೆಣ್ಣು ಮಗುವನ್ನು ಕೊಲೆಗೈದಿದ್ದಾನೆ.
ಈ ಘಟನೆ ಮಹಾರಾಷ್ಟ್ರದ ಗೊಂದಿಯಾ ಜಿಲ್ಲೆಯಲ್ಲಿ ನಡೆದಿದೆ. ಮಗು ಅಳುತ್ತಿದೆ. ಸ್ನ್ಯಾಕ್ಸ್ ತರಬೇಕು 5 ರುಪಾಯಿ ಹಣ ಕೊಡಿ ಎಂದು ಈತನ ಪತ್ನಿ ಕೇಳಿದ್ದಾನೆ. ಇಷ್ಟಕ್ಕೆ ಕುಪಿತಗೊಂಡ ಪಾಪಿ ಗಂಡ ಕುಡಿದ ಮತ್ತಿನಲ್ಲಿ 20 ತಿಂಗಳ ಹೆಣ್ಣು ಮಗುವನ್ನು ಎತ್ತಿ ಕದಕ್ಕೆ ಚಚ್ಚಿದ್ದಾನೆ. ಪರಿಣಾಮ ಮಗು ಮೃತ ಪಟ್ಟಿದೆ. ಈ ಬಗ್ಗೆ ಆತನ ಹೆಂಡತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
PublicNext
05/02/2021 09:36 pm