ಬೆಂಗಳೂರು : ಮಹಿಳೆಯರ ಮೇಲಿನ ದೌರ್ಜನ್ಯ ಇನ್ನು ನಿಂತೇ ಇಲ್ಲ. ಒಂದಿಲ್ಲೊಂದು ರೀತಿಯಲ್ಲಿ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ.
ಇಲ್ಲೊಬ್ಬ ಕಿರಾತಕ ಪತಿ ಹೆಂಡತಿಗೆ ಇಷ್ಟವಿಲ್ಲ ಕೆಲಸ ಮಾಡುವಂತೆ ಒತ್ತಡ ಹಾಕುವ ಮೂಲಕ ಅವಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆ. ಅಷ್ಟಕ್ಕೂ ಪತಿ ಮಾಡಿದ್ದು ಎನು ಅಂತಿರಾ ಇಲ್ಲಿದೆ ನೋಡಿ ಡಿಟೈಲ್ಸ್
ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ವರ್ತೂರಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪದ್ಮಾವತಿ(38) ಎಂದು ಗುರುತಿಸಲಾಗಿದೆ. ಈಕೆಯ ಪತಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಈತನ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಹಾದಿ ತುಳಿದಿದ್ದಾಳೆ.
ಪದ್ಮಾವತಿ ಅವರು 15 ವರ್ಷಗಳ ಹಿಂದೆ ಟೆಕ್ಕಿ ಭಾಸ್ಕರ್ ನನ್ನು ಮದುವೆಯಾಗಿದ್ದರು. ಈ ದಂಪತಿಗೆ 11 ವರ್ಷದ ಗಂಡು ಮಗುವೊಂದಿದೆ.
ಮೋಜು- ಮಸ್ತಿ ಅಂತ ಭಾಸ್ಕರ್ ತೇಲಾಡುತ್ತಿರುತ್ತಿದ್ದ ಟೆಕ್ಕಿ ಪಾರ್ಟಿಗಳಲ್ಲಿ ಕೂಡ ಭಾಗಿಯಾಗುತ್ತಿದ್ದು, ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನು. ಅದರಲ್ಲೂ ತಾನು ಬೇರೆಯವರ ಜೊತೆ ಡ್ಯಾನ್ಸ್ ಮಾಡಿದ್ದಲ್ಲದೇ ಪತ್ನಿಯನ್ನು ಕೂಡ ಡ್ಯಾನ್ಸ್ ಮಾಡುವಂತೆ ಪಿಡಿಸುತ್ತಿದ್ದ. ಇದಕ್ಕೆ ಪದ್ಮಾವತಿ ಒಪ್ಪದಿದ್ದಾಗ ಆಕೆಗೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.
ಗಂಡನ ಇಂತಹ ಮಾನಸಿಕ ಕಿರುಕುಳ ತಾಳಲಾರದೆ ಪದ್ಮಾವತಿ ಈ ಹಿಂದೆ ಮೂರು ಬಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದರು. ಆದರೆ ಇದೀಗ ನಾಲ್ಕನೇ ಬಾರಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪತಿ ಭಾಸ್ಕರ್ ನನ್ನು ವರ್ತೂರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
PublicNext
05/02/2021 04:01 pm