ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳ Love Marriageಗೆ ಒಪ್ಪದ ಪೋಷಕರು : ಅಳಿಯನ 250 ಅಡಿಕೆ ಮರ ಕಡಿದ ಬೀಗರು…!

ತುಮಕೂರು: ಸಮಾಜ ಎಷ್ಟೇ ಮುಂದುವರೆದಿದ್ದರು ಇನ್ನು ಲವ್ ಮ್ಯಾರೇಜ್, ಅಂತರ್ಜಾತಿ ವಿವಾಹಕ್ಕೆ ಒಪ್ಪದವರು ಇದ್ದಾರೆ. ಇಲ್ಲೊಂದು ಘಟನೆಯಲ್ಲಿ ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕೆಯ ಗಂಡನಿಗೆ ಸೇರಿದ ಅಡಿಕೆ ಗಿಡಗಳನ್ನು ಪೋಷಕರು ನಾಶಪಡಿಸಿದ ಘಟನೆ ತಾಲೂಕಿನ ಮಲ್ಲ ಸಂದ್ರಪಾಳ್ಯದಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಪೋಷಕರ ವಿರುದ್ಧದ ನಡುವೆಯೂ ಮಗಳು ಅನು, ರವಿಚಂದ್ರ ಎಂಬಾತನನ್ನು ವಿವಾಹವಾಗಿದ್ದರು. ಇದೇ ದ್ವೇಷಕ್ಕೆ ರವಿಚಂದ್ರಗೆ ಸೇರಿದ 250 ಅಡಕೆ ಗಿಡಗಳನ್ನು ಅನು ಪೋಷಕರು ನಾಶಪಡಿಸಿದ್ದಾರೆ. ಮರಗಳನ್ನು ಕಡಿದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸಂತೋಷ ಹಾಗೂ ಗಂಗಮ್ಮ ಎಂಬುವವರ ವಿರುದ್ಧ ಆರೋಪ ಕೇಳಿಬಂದಿದೆ.

Edited By : Nirmala Aralikatti
PublicNext

PublicNext

04/02/2021 01:41 pm

Cinque Terre

66.15 K

Cinque Terre

4