ಬೆಳಗಾವಿ: ಮಾರಿಹಾಳ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಷ್ಟೇ ಗ್ರಾಮದ ಮಟಕಾ ಅಡ್ಡೆಯ ಮೇಲೆ ಪೊಲೀಸರು ತಡರಾತ್ರಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಅಷ್ಟೇ ಗ್ರಾಮದ ಲಕ್ಷ್ಮಣ ಕೆಂಚಪ್ಪ ನಾಯಕ್, ರಾಜು ಗಣಪತಿ ಕಾಕತಿ, ರಮೇಶ್ ಗುರುನಾಥ ದೊಡಮನಿ ಹಾಗೂ ಸುಧಾಕರ ಸೆಟ್ಟೆಪ್ಪ ನಂದಗಡಕರ ಬಂಧಿತರು. ಪೊಲೀಸರು ಆರೋಪಿಗಳಿಂದ 8,220 ರೂ. ನಗದು, 3 ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಫೆಬ್ರವರಿ ೨ರಂದು ದಾಳಿ ನಡೆಸಿದ್ದರು. ಈ ಕುರಿತು ಮಾರಿಹಾಳ ಠಾಣೆ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿಗಳು, ಮಟಕಾ ಬುಕ್ಕಿಗಳಾದ ಅಶೋಕ ಶಿವಾಜಿ ನಾಯಕ, ನಿತೀನ್ ಪೆಡ್ನೆಕರಗೆ ಪೊಲೀಸರು ಬಲೆ ಬೀಸಿದ್ದಾರೆ.
PublicNext
04/02/2021 10:41 am