ಬೀದರ್ : ಬಸ್ ನಿಲುಗಡೆಗಾಗಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಯ ಮೇಲೆ ಪಿಎಸ್ಐ ಹಲ್ಲೆ ಮಾಡಿದ್ದಾರೆ. ಈ ಘಟನೆ ಬೀದರ್ ನಗರಲ್ಲಿ ನಡೆದಿದೆ.
ಸಮೀಪದ ಅಣದೂರು ಗ್ರಾಮದಲ್ಲಿ ಸಾರಿಗೆ ಬಸ್ಸುಗಳು ನಿಲುಗಡೆ ಇಲ್ಲದೇ ಸಂಚರಿಸುತ್ತಿದ್ದವು. ಹೀಗಾಗಿ ಆಕ್ರೋಶಿತರಾದ ವಿದ್ಯಾರ್ಥಿಗಳು ಇವತ್ತು ಬೆಳಿಗ್ಗೆಯಿಂದ ಕಲಬುರಗಿ-ಬೀದರ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಜನವಾಡ ಠಾಣೆ ಪಿಎಸ್ಐ ಶಿವರಾಜ್ ಪಾಟೀಲ್, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಆದರೂ ಪಟ್ಟು ಸಡಿಲಿಸದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಇನ್ಸ್ಪೆಕ್ಟರ್ ಶಿವರಾಜ್ ಪಾಟೀಲ್ ಅವರು ಸಚಿನ್ ಮಾಲೆ ಎಂಬ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ.
ಪ್ರತಿಭಟನಾ ನಿರತ ಶಾಲಾ- ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಇನ್ಸ್ಪೆಕ್ಟರ್ ಶಿವರಾಜ್ ಮೇಲೆ ವಿದ್ಯಾರ್ಥಿಗಳು ಆಕ್ರೋಶಿತರಾಗಿದ್ದಾರೆ.
PublicNext
03/02/2021 06:09 pm