ಹೊಸದಿಲ್ಲಿ : ಗಣರಾಜ್ಯೋತ್ಸವದಂದು ಸಂಭವಿಸಿದ ಹಿಂಸಾಚಾರದಲ್ಲಿ ಪೊಲೀಸರ ಗುಂಡಿಗೆ ಓರ್ವ ರೈತ ಬಲಿಯಾಗಿದ್ದಾನೆಂದು ಸುಳ್ಳು ಸುದ್ದಿ ಬಿತ್ತರಿಸಿದ ಪತ್ರಕರ್ತ ರಾಜದೀಪ್ ಸರದೇಸಾಯಿ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಇನ್ನೂ ಕೆಲವರ ವಿರುದ್ಧ ಉತ್ತರ ಪ್ರದೇಶ, ದಿಲ್ಲಿಯಲ್ಲಿ ಎಫ್ಐಆರ್ ದಾಖಲಾಗಿವೆ.
ತಮ್ಮ ವಿರುದ್ದ ವಿವಿದ ಪ್ರದೇಶಗಳಲ್ಲಿ ದಾಖಲಾಗಿರುವ ಎಫ್ಐಆರ್ ಗಳಿಂದ ಮುಕ್ತಿಗೊಳಿಸುವಂತೆ ಸರದೇಸಾಯಿ ಹಾಗೂ ತರೂರ್ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ.
ಅಂದಿನ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಓರ್ವ ರೈತ ಪೊಲೀಸರ ಗುಂಡಿಗೆ ಬಲಿಯಾದ್ದಾನೆಂದು ಇಬ್ಬರೂ ಸುಳ್ಳು ಸುದ್ದಿ ಹರಡಿದ್ದರು. ಆದರೆ ವಾಸ್ತವದಲ್ಲಿ, ಚಾಲಕ ಅತಿ ವೇಗವಾಗಿ ಬಂದು ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿತ್ತು. ಆಗ ಅದರ ಕೆಳಗೆ ಸಿಕ್ಕು ರೈತ ಮೃತಪಟ್ಟಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
ಆದರೆ ಈ ಇಬ್ಬರೂ ಸತ್ಯವನ್ನು ಅರಿತುಕೊಳ್ಳದೆ ಪೊಲೀಸರ ಗುಂಡಿಗೆ ರೈತ ಬಲಿಯಾಗಿದ್ದಾನೆಂದು ಟ್ವೀಟ್ ಮಾಡಿ ಸುಳ್ಳು ಸುದ್ದಿ ಹರಡಿದ್ದರು. ಇಷ್ಟೇ ಅಲ್ಲ ರಾಜದೀಪ್ ಸರದೇಸಾಯಿ ತಮ್ಮ ಮಾಧ್ಯಮದಲ್ಲಿ ಪದೇ ಪದೇ ಪ್ರಸಾರ ಮಾಡಿದ್ದರು. ಇದನ್ನು ನಂಬಿದ ಪ್ರತಿಭಟನಕಾರರು ಹಿಂಸಾಚಾರಕ್ಕೆ ಮುಂದಾದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಇದೇ ಪ್ರಕರಣದಲ್ಲಿ ತರೂರ್ , ರಾಜದೀಪ್ ಅವರೊಂದಿಗೆ ಕಾಂಗ್ರೆಸ್ ಮುಖವಾಣಿ ನ್ಯಾಶನಲ್ ಹೆರಾಲ್ಡ್ ಹಿರಿಯ ಸಲಹಾ ಸಂಪಾದಕ ಮೃಣಾಲ್ ಪಾಂಡೆ, ಖ್ವಾಮಿ ಆವಾಜ್ ಎಡಿಟರ್ ಜಾಫರ್ ಸೇರಿದಂತೆ ಅನೇಕರ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
PublicNext
03/02/2021 12:47 pm