ಗದಗ: ಜಮೀನಿನ ಉತಾರ ನೀಡಲು ಮೂರುವರೆ ಸಾವಿರ ಲಂಚ ಪಡೆಯುವ ವೇಳೆ ಕಂಪ್ಯೂಟರ್ ಆಪರೇಟರ್ ಒಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಶರಣಪ್ಪ ಗೌಳಿ ಎಂಬಾತನೇ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಾತ. ಆಸ್ತಿ ಖಾತೆ ಬದಲಾವಣೆ ಮಾಡಿ ಗಣಕೀಕೃತ ಉತಾರ ನೀಡುವಂತೆ ಮಹೇಶ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಇದೇ ಉತಾರ ನೀಡಲು ಶರಣಪ್ಪ ಮೂರುವರೆ ಸಾವಿರ ರುಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ.
ಈ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿರುವಾಗಲೇ ಶರಣಪ್ಪನನ್ನು ರೆಡ್ ಹ್ಯಾಂಡಾಗಿ ವಶಕ್ಕೆ ಪಡೆದಿದ್ದಾರೆ.
PublicNext
02/02/2021 08:00 pm