ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡದಿ,ಮಗನಿಗೆ ಗುಂಡಿಟ್ಟ ಗಂಡ ಆತ್ಮಹತ್ಯೆ ಮಾಡಿಕೊಂಡ : ಸುಖ ಸಂಸಾರದ ಅಂತ್ಯಕ್ಕೆ ಕಾರಣವೇನು?

ಅಮೃತಸರ: ಮಡದಿ,ಮಗನಿಗೆ ಗುಂಡಿಟ್ಟ ಗಂಡ ತಾನು ಇಹಲೋಕ ತ್ಯಜಿಸಿದ ಘಟನೆ ಪಂಜಾಬ್ ನ ಅಮೃತಸರದ ಗುರು ತೇಘ್ ಬಹದೂರ್ ನಗರದಲ್ಲಿ ನಡೆದಿದೆ. ಘಟನೆಗೆ ಕಾರಣವೇನು ಎನ್ನುವುದರ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಕ್ರಮ್ಜೀತ್ ಹೆಸರಿನ ವ್ಯಕ್ತಿ ಹೆಂಡತಿ ಮತ್ತು ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ್ದಾನೆ. ವಿಕ್ರಮ್ ಜೀತ್ ಒಬ್ಬ ಫೈನ್ಸಾನ್ಶಿಯರ್ ಆಗಿದ್ದು, ಮಾರ್ಕೆಟ್ ನಲ್ಲಿ ಸಾಕಷ್ಟು ದುಡ್ಡು ಹಾಕಿದ್ದನಂತೆ. ಅದರಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲೇ ಆತ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ.

ಸಾಯುವುದಕ್ಕೂ ಮೊದಲು ಆತ ಒಂದು ವಿಡಿಯೋ ಮಾಡಿಟ್ಟಿದ್ದಾನೆ. ನನ್ನ ಸ್ನೇಹಿತನ ಗನ್ ತೆಗೆದುಕೊಂಡು ಬಂದು ಅದರಲ್ಲಿ ನನ್ನ ಹೆಂಡತಿ ಮತ್ತು ಮಗನನ್ನು ಕೊಲೆ ಮಾಡಿದ್ದೇನೆ. ಈಗ ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸ್ನೇಹಿತನಿಗೆ ಸುಳ್ಳು ಹೇಳಿ ಗನ್ ಪಡೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾನೆ. ಪೊಲೀಸರು ಈ ವಿಚಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆ ಮತ್ತು ಆತ್ಮಹತ್ಯೆಗೆ ನಿಖರ ಕಾರಣವನ್ನು ಹುಡುಕುತ್ತಿದ್ದಾರೆ.

Edited By : Nirmala Aralikatti
PublicNext

PublicNext

02/02/2021 03:52 pm

Cinque Terre

61.72 K

Cinque Terre

3

ಸಂಬಂಧಿತ ಸುದ್ದಿ