ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3ನೇ ಮದುವೆಗಾಗಿ ಮೊದಲ ಪತ್ನಿಗೆ ತಲಾಖ್: 2ನೇ ಪತ್ನಿ ಕೊಲೆ

ತುಮಕೂರು: ಹಣದಾಸೆಗಾಗಿ ಪಾಪಿ ಪತಿ ಪತ್ನಿಯನ್ನು ಕೊಲೆಗೈದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆದಿನಾಯಕನಹಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಕಲ್ಲಾಪುರದ ಅನಾಥೆ ಸಾಹೀರಬಾನು ಕೊಲೆಯಾದ ಮಹಿಳೆ. ಈಕೆಯನ್ನು ತಿಪಟೂರಿನ ಆದಿನಾಯಕನಹಳ್ಳಿ ನಿವಾಸಿ ಜಾಫರ್ ಪಾಷ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಹಣದಾಸೆ ಮತ್ತು ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನು ಹೊಡೆದು ಉಸಿರುಗಟ್ಟಿಸಿ ಕೊಂದುಹಾಕಿದ್ದಾನೆ ಎಂದು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿಂದೆ ಜಾಫರ್ ಪಾಷ ಮೊದಲ ಹೆಂಡತಿಯ ಜೊತೆ ಸಂಸಾರ ನಡೆಸಲಾಗದೆ ಆಕೆಗೆ ತಲಾಖ್ ನೀಡಿ ತಲೆ ಮರೆಸಿಕೊಂಡಿದ್ದ. ನಂತರ ಈಗ ಕೊಲೆಯಾಗಿರುವ ಸಾಹಿರ ಬಾನುವನ್ನು ಎರಡನೇ ಮದುವೆಯಾಗಿ ಕರೆತಂದಿದ್ದಾನೆ.

ಈಕೆಯೊಂದಿಗೆ ನಾಲ್ಕೈದು ತಿಂಗಳು ಸರಿಯಾಗಿಯೇ ಸಂಸಾರ ಮಾಡಿಕೊಂಡಿದ್ದ ಜಾಫರ್ ಪಾಶ ನಂತರ ಆಕೆಗೂ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಸಾಹೀರಾ ಎರಡನೇ ಹೆಂಡತಿಯಾಗಿ ಬಂದ ನಂತರ ಗ್ರಾಮದಲ್ಲಿ ಮನೆ ಕಟ್ಟಬೇಕು, ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನಂತೆ. ಒತ್ತಡ ತಾಳಲಾರದೆ ಸಾಹಿರಾ, ತನ್ನ ತವರು ಮನೆಯಿಂದ 5 ಲಕ್ಷ ರೂ. ಹಣವನ್ನೂ ತಂದುಕೊಟ್ಟಿದ್ದಳಂತೆ. ಇಷ್ಟಕ್ಕೇ ಸುಮ್ಮನಾಗದ ಜಾಫರ್ ಇನ್ನೂ ಹಣ ತರಲು ಪೀಡಿಸುತ್ತಿದ್ದ ಎಂಬ ಮಾಹಿತಿ ದೊರೆತಿದೆ.

ಇದರ ಜೊತೆಗೆ ಎರಡನೇ ಹೆಂಡತಿಗೆ ತಿಳಿಯದಂತೆ ಈತ ಮೂರನೇ ಮದುವೆಯಾಗಿದ್ದಾನೆ. ಬಳಿಕ ಸಾಹೀರಳನ್ನು ಬಿಟ್ಟು ಮೂರನೇ ಹೆಂಡತಿಯ ಜೊತೆಗಿದ್ದವನು, ಮುಂದಿನ ಜೀವನಕ್ಕೆ ಎರಡನೇ ಹೆಂಡತಿ ಅಡ್ಡಿಯಾಗುತ್ತಾಳೆಂದು ಕೊಲೆ ಮಾಡಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.

ಕೊಲೆಯಾದ ಸಾಹಿರಾ ಬಾನು ಸಂಬಂಧಿಕರು ನೀಡಿದ ದೂರಿನ ಅನ್ವಯ ಆರೋಪಿ ಝಾಫರ್ ಬಾಷಾನನ್ನು ತಿಪಟೂರು ಪೊಲೀಸರು ಅರೆಸ್ಟ್ ಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ.

Edited By : Nagaraj Tulugeri
PublicNext

PublicNext

02/02/2021 03:09 pm

Cinque Terre

77.2 K

Cinque Terre

31

ಸಂಬಂಧಿತ ಸುದ್ದಿ