ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಕ್ತ ಚಂದನ ಸಾಗಣೆ: ಕಾರುಗಳ ಮೇಲೆ ಫೈರಿಂಗ್

ಕೋಲಾರ: ಅಕ್ರಮವಾಗಿ ರಕ್ತ ಚಂದನ ಸಾಗಣೆ ನಡೆಸಿದ್ದ ಕಾರುಗಳ ಮೇಲೆ ಪೋಲೀಸರು ಫೈರಿಂಗ್ ನಡೆಸಿ ಆರೋಪಗಳ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಕೋಲಾರದ ಬೆಳಗಾನಹಳ್ಳಿ ಎಂಬಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಕ್ತ ಚಂದನವನ್ನು ಅಕ್ರಮವಾಗಿ ಸಾಗಣೆ ನಡೆಸಿದ್ದ ಇನ್ನೋವಾ ಮತ್ತು ಮಾರುತಿ ಕಾರುಗಳ ಮೇಲೆ ಪೋಲೀಸರು ಫೈರಿಂಗ್ ನಡೆಸಿದ್ದಾರೆ. ಆಂಧ್ರಪ್ರದೇಶದಿಂದ ಬೆಂಗಳೂರಿನತ್ತ ಹೊರಟಿದ್ದ ಕಾರುಗಳ ಮೇಲೆ ಫೈರಿಂಗ್ ನಡೆದಿದೆ.

ಈ ವೇಳೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಲಕ್ಷಾಂತರ ಬೆಲೆಯ ರಕ್ತ ಚಂದನ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Edited By : Nagaraj Tulugeri
PublicNext

PublicNext

01/02/2021 10:46 pm

Cinque Terre

74.43 K

Cinque Terre

0