ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಜನ ಮರಳೋ ಜಾತ್ರೆ ಮರಳೋ.. ಪುಕ್ಕಟ್ಟೆ ಜಾಗ ಸಿಗುತ್ತೆ ಅಂತಾ ಜನರು ಹಿಂಗಾ ಮಾಡೋದಾ...?

ದಾವಣಗೆರೆ: ಪುಕ್ಕಟ್ಟೆ ಜಾಗ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ‌. ಓಡೋಡಿ ಹೋಗ್ತಾರೆ. ಅಲ್ಲೇ ಹೋಗಿ ಟೆಂಟ್ ಹಾಕ್ಕೊಂಡು ಜಾಗ ನಮ್ಮದೇ ಅನ್ನುತ್ತಾರೆ. ಇಲ್ಲೂ ಕೂಡ ಅದೇ ಆಗಿದೆ. ಕೊನೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂದುಕೊಂಡು ವಾಪಸ್ ಮನೆಗೆ ಜನರು ಬರಿಗೈಯಲ್ಲಿ ಬಂದಿದ್ದಾರೆ.

ಇಂಥ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ. ಪುಕ್ಕಟ್ಟೆ ಜಾಗ ಸಿಗುತ್ತೆ ಅಂತ ಸಾವಿರಾರು ಜನರು ಓಡೋಡಿ ಬಂದಿದ್ದಾರೆ.‌ 'ಜಾಗ ನಂದು' ಅಂತ ಸಲಕಿ ಗುದ್ದಲಿ ತಂದು ಗೂಟ ನೆಟ್ಟು ಬಿಟ್ಟಿದ್ದಾರೆ.

ಚಿಕ್ಕುಲಿಕೆರೆ ಗ್ರಾಮದ ಸರ್ವೇ ನಂಬರ್ 91, ಲಕ್ಷ್ಮೀಸಾಗರದ ಸರ್ವೇ ನಂಬರ್ 15 ರಲ್ಲಿ ೧೫೦ ಎಕರೆ ಜಮೀನನ್ನು ಉಚಿತವಾಗಿ ನೀಡಲಾಗುತ್ತಿದೆ. ಯಾರು ಮೊದಲು ಬರುತ್ತಾರೋ ಅವರಿಗೆ ನೀಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಜನರು ಎದ್ನೋ ಬಿದ್ನೋ ಎಂದು ಓಡೋಡಿ ಬಂದಿದ್ದಾರೆ.

ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟು ಬೇಲಿ ಹಾಕಲು ಜನರು ಮುಂದಾಗಿದ್ದರು.‌ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಪುರಸಭೆ ಸದಸ್ಯರು ಮನೆ ಕಟ್ಟಲು ಹೇಳಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು.‌ ಸುಳ್ಳು ಸುದ್ದಿ ನಂಬಿ ಖಾಲಿ ಜಾಗದಲ್ಲಿ ಮನೆ ಕಟ್ಟಲು ಕೆಲವರು ಮುಂದಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ವಾಪಸ್ ಕಳುಹಿಸಿದ್ದಾರೆ. ಇದಕ್ಕೆ ಅಲ್ವಾ ಹೇಳೋದು ಜನ ಮರಳೋ ಜಾತ್ರೆ ಮರಳೋ ಅಂತಾ ಅಲ್ವಾ.

Edited By : Nagesh Gaonkar
PublicNext

PublicNext

31/01/2021 05:16 pm

Cinque Terre

95.11 K

Cinque Terre

0

ಸಂಬಂಧಿತ ಸುದ್ದಿ