ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಕೊಂದು ನಾಲಿಗೆಯನ್ನೇ ತಿಂದಳು ಹೆತ್ತ ತಾಯಿ

ತಿರುಪತಿ: ಜ್ಯೋತಿಷಿಯ ಮಾತು ಕೇಳಿ ಹೆತ್ತ ಪೋಷಕರೇ ಮಕ್ಕಳನ್ನು ಕೊಂದ ಘಟನೆ ಜನವರಿ 24ರಂದು ನಡೆದಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಒಂದೊದೇ ಸತ್ಯ ಹೊರಬೀಳುತ್ತಿವೆ. ಈಗ ಗೊತ್ತಾಗಿದ್ದು ಭಯಾನಕ ಸತ್ಯ. ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ ತಾಯಿ ನಂತರ ಶವದ ನಾಲಿಗೆ ಕಟ್ ಮಾಡಿಕೊಂಡು ತಿಂದಳಂತೆ. ಹೀಗಂತಾ ಕೊಲೆಗೈದ ಪಾಪಿ ತಾಯಿ ಪದ್ಮಜಾಳ ಪತಿ ಪುರುಷೋತ್ತಮ ನಾಯ್ಡು ಹೇಳಿದ್ದಾರೆ. ಮರಣೋತ್ತರ ವರದಿ ಬಂದ ನಂತರವಷ್ಟೇ ಈ ಬಗ್ಗೆ ಸ್ಪಷ್ಟತೆ ಬರಬೇಕಿದೆ.

ಇತ್ತ ಮಕ್ಕಳನ್ನು ಕೊಂದ ಆರೋಪದ ಮೇಲೆ ಜೈಲು ಪಾಲಾಗಿರುವ ಪುರುಷೋತ್ತಮ ಹಾಗೂ ಪದ್ಮಜಾ ದಂಪತಿಯ ಮಾನಸಿಕ ಸ್ಥಿಮಿತ ದಿನೇ ದಿನೇ ಹದಗೆಡುತ್ತಿದೆ‌. ವೈದ್ಯರ ಮುಂದೆ ಮಂತ್ರ ಪಠಣ ಮಾಡುತ್ತಿರುವ ಪದ್ಮಜ ನನ್ನ ಮಕ್ಕಳು ಸತ್ತಿಲ್ಲ. ಅವರು ಮತ್ತೆ ಬಂದೇ ಬರುತ್ತಾರೆ. ಮನೆಗೆ ವಾಪಸ್ ಹೋಗಬೇಕು. ಜೈಲಿನಲ್ಲಿ ನನ್ನ ಜೊತೆ ಇದ್ದ ಶಿವ ಕೃಷ್ಣ ಇಲ್ಲಿ ಕಾಣುತ್ತಿಲ್ಲ. ಎಂದು ಮಲಗಿದಲ್ಲೇ ಬಡ ಬಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

Edited By : Nagaraj Tulugeri
PublicNext

PublicNext

30/01/2021 11:17 pm

Cinque Terre

130.84 K

Cinque Terre

19