ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ವೆಗೆ ಒಪ್ಪದ ಪ್ರೇಯಸಿಯ ಕೊಂದು ಪರಾರಿಯಾಗಿದ್ದ ಪಾಗಲ್ ಪ್ರೇಮಿ ನೇಣಿಗೆ ಶರಣು

ಹಾಸನ: ಮದುವೆಗೆ ಒಪ್ಪದ ಪ್ರೇಯಸಿಯನ್ನು ಕೊಲೆಗೈದು ಪರಾರಿಯಾಗಿದ್ದ ಯುವಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೋಗರವಳ್ಳಿಯಲ್ಲಿ ನಡೆದಿದೆ.

ಹೇಮಂತ್​ ಆತ್ಮಹತ್ಯೆಗೆ ಶರಣಾದ ಯುವಕ. ಕೋಗರವಳ್ಳಿಯ ಸಮೀಪದ ಕಾಫಿ ತೋಟದಲ್ಲಿ ಹೇಮಂತ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆಯಾಗುವಂತೆ ಹೇಮಂತ್​ ತನ್ನ ಗೆಳತಿ ಸುಶ್ಮಿತಾಳಿಗೆ ಕೇಳಿಕೊಂಡಿದ್ದ. ಆದರೆ ಯುವತಿ ಒಪ್ಪದಿದ್ದಾಗ ಸಿಟ್ಟಿಗೆದ್ದ ಹೇಮಂತ,​ ಸುಶ್ಮಿತಾಳನ್ನು ಕೊಲೆಗೈದು ಪರಾರಿಯಾಗಿದ್ದ. ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಹೇಮಂತ್‌ ಹತ್ಯೆಗೈದ ಯುವತಿಯ ಸೋದರ ರಕ್ಷಿಸಿದ್ದ. ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದ ಹೇಮಂತ್​ ಕಾಫಿ ತೋಟದಲ್ಲಿ ನೇಣಿಗೆ ಶರಣಾಗಿದ್ದಾನೆ.

Edited By : Vijay Kumar
PublicNext

PublicNext

29/01/2021 08:54 am

Cinque Terre

93.35 K

Cinque Terre

3