ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಶ್ರೀಗಳ ಹೆಸರಿನಲ್ಲಿ ಜಿಲ್ಲೆಯ ಪಂಡಿತನಹಳ್ಳಿ ಗೇಟ್‌ನ ಬಸ್ತಿ ಬೆಟ್ಟದ ಬಳಿ ನಿರ್ಮಾಣವಾಗುತ್ತಿದ್ದ ಜೈವಿಕ ವನದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಸಿದ್ಧಗಂಗಾ ಸಂಸ್ಥೆಗೆ ಸೇರಿದ ಜೈವಿಕವನದಲ್ಲಿ ಹಲವು ಗಿಡಮೂಲಿಕೆಗಳನ್ನು ಬೆಳೆಸಲಾಗುತ್ತಿತ್ತು. ಆದರೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶಗೊಂಡಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
29/01/2021 08:41 am