ಮಂಗಳೂರು : ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೆ ಒಳಗಾಗಿ ಇಂಡೋನೇಷ್ಯಾದಲ್ಲಿ ಉಳ್ಳಾಲ ಮೂಲದ ಯುವಕನೊಬ್ಬ ಜೈಲು ಪಾಲಾಗಿದ್ದಾನೆ.ಇಂಡೋನೇಷ್ಯಾದಲ್ಲಿ ಉದ್ಯೋಗ ಹುಡುಕುತ್ತಿದ್ದ ಟ್ರಾವೆಲ್ ಏಜೆನ್ಸಿ ಯ ವಂಚನೆಯಿಂದಾಗಿ ಬರೋಬ್ಬರಿ ಆರು ಲಕ್ಷ ರೂ. ಕಳೆದುಕೊಂಡಿದ್ದಾನೆ.
ಸದ್ಯ ಡಿಪ್ಲೊಮಾ ಓದಿರುವ ಯುವಕ ಮೊಹಮ್ಮದ್ ನಿಯಾಜ್ ಟ್ರಾವೆಲ್ ಏಜೆನ್ಸಿಯ ಮಾಲೀಕ ಮಂಗಳೂರು ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲೀಕ ಶಮೀರ್ ರಿಜ್ವಾನ್ ಅವರು 6 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
"ಶಮೀರ್ ನನ್ನ ಮಗನಿಗೆ ಉದ್ಯೋಗ ನೀಡುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡಿದ್ದಾರೆ. ವೀಸಾಕ್ಕಾಗಿ 6 ಲಕ್ಷ ರೂ. ತೆಗೆದುಕೊಂಡಿದ್ದಾರೆ. ನಾವು ಆತನಿಗೆ 6 ಲಕ್ಷ ರೂ. ನೀಡಿದರೆ ನನ್ನ ಮಗನಿಗೆ ತಿಂಗಳಿಗೆ 2 ಲಕ್ಷ ರೂ. ಸಂಬಳ ಬರುವ ಮೆಕ್ಯಾನಿಕಲ್ ಎಂಜಿನಿಯರ್ ಕೆಲಸವನ್ನು ಕೊಡಿಸುವುದಾಗಿ ಹೇಳಿದರು. ಬಳಿಕ ನನ್ನ ಮಗನನ್ನು ವಿಸಿಟಿಂಗ್ ವೀಸಾ ಮೂಲಕ ಇಂಡೋನೇಷ್ಯಾಕ್ಕೆ ಕರೆದೊಯ್ದರು. ನಾನು 2019 ರ ಜುಲೈ ತಿಂಗಳಲ್ಲಿ 3.5 ಲಕ್ಷ ರೂ. ಮತ್ತು 2020 ಫೆಬ್ರವರಿ ತಿಂಗಳಲ್ಲಿ 2.5 ಲಕ್ಷ ರೂ. ಪಾವತಿ ಮಾಡಿದ್ದೇನೆ" ಸಂತ್ರಸ್ತ ನಿಯಾಜ್ ಅವರ ತಂದೆ ಅಬ್ದುಲ್ ಅಜೀಜ್ ದೂರಿದ್ದಾರೆ.
"2020 ರ ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ನಾನು ನಮ್ಮ ಜಿಲ್ಲೆಯ ಇತರ ಮೂವರು ಯುವಕರೊಂದಿಗೆ ಇಂಡೋನೇಷ್ಯಾದಲ್ಲಿ ರೂಮಿನಲ್ಲಿದ್ದೆ. ಸೆಪ್ಟೆಂಬರ್ ನಲ್ಲಿ ನಮ್ಮನ್ನು ವಲಸೆ ಅಧಿಕಾರಿಗಳು ದೇಶದಲ್ಲಿ ಅಕ್ರಮವಾಗಿ ಉಳಿದ ಆರೋಪದಲ್ಲಿ ಬಂಧಿಸಿದ್ದು 14 ದಿನಗಳ ಜೈಲುವಾಸ ಅನುಭವಿಸಿದೆ. ನಾವು ಪ್ರಕರಣದಲ್ಲಿ ಕಾನೂನುಬದ್ಧವಾಗಿ ಹೋರಾಡಿದ ಬಳಿಕ ಅವರು ನಮ್ಮನ್ನು ಬಿಡುಗಡೆ ಮಾಡಿದರು" ಎನ್ನುತ್ತಾರೆ ಸಂತ್ರಸ್ತ ನಿಯಾಜ್.
"ನನ್ನನ್ನು ಮಂಗಳೂರಿಗೆ ವಾಪಾಸ್ ಕರೆತರಲೆಂದು ನನ್ನ ತಂದೆ 8 ಲಕ್ಷ ರೂ. ಖರ್ಚು ಮಾಡಿದ್ದಾರೆ. ಉದ್ಯೋಗಕಾಂಕ್ಷಿಗಳಿಂದ ಸಂಗ್ರಹಿಸಿದ ಹಣವನ್ನು ಇಂಡೋನೇಷ್ಯಾದ ಟ್ರಾವೆಲ್ ಏಜೆಂಟರೊಂದಿಗೆ ಶಮೀರ್ ಹಂಚಿಕೊಳ್ಳುತ್ತಿದ್ದರು ಎಂದು ನಿಯಾಜ್ ತಿಳಿಸಿದ್ದಾರೆ.
PublicNext
28/01/2021 02:45 pm