ಬೆಂಗಳೂರು : ಯಾರನ್ನಾ ನಂಬಬೇಕು? ಯಾಕೆ ಜನ ಹೀಗೆ ಹೆಣ್ಣನ್ನು ಭೋಗದ ವಸ್ತುವಾಗಿ ಭಾವಿಸುತ್ತಾರೆ? ಹೀಗೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಕಂಡಾಗಲ್ಲೇಲ್ಲ ಪ್ರಶ್ನೆಗಳು ಮೂಡುತ್ತವೆ ಆದ್ರೆ ಅವಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಮಾತ್ರ ಬ್ರೇಕ್ ಬೀಳತ್ತಿಲ್ಲ.
ಇಲ್ಲೋಬ್ಬ ನೀಚ ತನ್ನ ಸ್ನೇಹಿತನ ತಂಗಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಹೀಗಾಗಿ 16 ವರ್ಷದ ಅಪ್ರಾಪ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೌದು ಭದ್ರತಾ ಸಿಬ್ಬಂದಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ರೇಪ್ ಮಾಡಿದ್ದಾನೆ. ಆರೋಪಿ ನೇಪಾಳ ಮೂಲದ ಎಚ್ ಎಸ್ ಆರ್ ಲೇಔಟ್ ನಿವಾಸಿ ಗೌತಮ್(32) ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ
ಪೋಷಕರನ್ನು ಕಳೆದುಕೊಂಡಿರುವ ಸಂತ್ರಸ್ತೆ ನೇಪಾಳದಿಂದ ನಗರಕ್ಕೆ ಬಂದು ಅಣ್ಣನ ಜತೆ ಎಚ್ಎಸ್ಆರ್ ಲೇಔಟ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು. ಸಂತ್ರಸ್ತೆಯ ಸಹೋದರ ಭದ್ರತಾ ಸಿಬ್ಬಂದಿಯಾಗಿದ್ದ. ಆರೋಪಿ ಕೂಡ ನೇಪಾಳದವನೇ ಆಗಿದ್ದ ಕಾರಣ ತೀರಾ ಪರಿಚಯಸ್ಥನಾಗಿದ್ದ.
ಬಾಲಕಿ ಜತೆ ಸ್ನೇಹ ಬೆಳೆಸಿಕೊಂಡಿದ್ದ ಆರೋಪಿ ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಹೋಗಿ ಅತ್ಯಾಚಾರ ಎಸಗಿದ್ದ. ಈ ವಿಚಾರ ತಡವಾಗಿ ಅಣ್ಣನ ಗಮನಕ್ಕೆ ಬಂದಿತ್ತು. ಕೂಡಲೇ ಸಂತ್ರಸ್ತ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಬಾಲಕಿಯ ಸಹೋದರ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಗೌತಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
PublicNext
28/01/2021 07:51 am