ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಫ್‌ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ: 6 ಮಂದಿ ಅರೆಸ್ಟ್‌, 24 ಲಕ್ಷ ನಗದು, 3 ವಾಹನಗಳು ಜಪ್ತಿ

ಬೆಂಗಳೂರು: ರಾಜ್ಯಾದಂತ್ಯ ಜನವರಿ 24ರಂದು (ನಾಳೆ) ನಡೆಯಬೇಕಿದ್ದ ಕೆಪಿಎಸ್‌ಸಿ ಪ್ರಥಮ ದರ್ಜೆ (ಎಫ್‌ಡಿಎ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿ ರಾಚಪ್ಪ, ಚಂದ್ರು ಸೇರಿದಂತೆ ಆರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳಿಂದ 24 ಲಕ್ಷ ನಗದು ಮತ್ತು ಮೂರು ವಾಹನಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಆರೋಪಿಗಳ ಬಳಿ ಇದ್ದ ಪ್ರಶ್ನೆ ಪತ್ರಿಕೆಗಳನ್ನು ಸಿಸಿಬಿ ಪೊಲೀಸರು ಕೆಪಿಎಸ್‌ಸಿಗೆ ಕಳುಹಿಸಿ ಪರಿಶೀಲನೆ ನಡೆಸಿದಾಗ ನಾಳೆ ನಡೆಯಬೇಕಿದ್ದ ಪರೀಕ್ಷೆಯ ಪತ್ರಿಕೆಗಳು ಎನ್ನುವುದು ಖಚಿತವಾಗಿದೆ. ಹೀಗಾಗಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.

Edited By : Vijay Kumar
PublicNext

PublicNext

23/01/2021 09:20 pm

Cinque Terre

111.82 K

Cinque Terre

7

ಸಂಬಂಧಿತ ಸುದ್ದಿ