ನವದೆಹಲಿ: ಪ್ರತಿಭಟನಾ ನಿರತ ನಾಲ್ವರು ರೈತ ನಾಯಕರ ಕೊಲೆಗೆ ಸಂಚು ರೂಪಿಸಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ದೆಹಲಿಯಲ್ಲಿ ಇದೇ 26ರಂದು ರೈತ ಸಂಘಟನೆಗಳು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿವೆ. ಈ ವೇಳೆ ನಾಲ್ವರು ರೈತ ನಾಯಕರನ್ನು ಹತ್ಯೆಗೈಯಲು ಸಂಚು ರೂಪಿಸಿ ಗಲಭೆ ನಡೆಸಲು ಪ್ರಯತ್ನಿಸಿದ್ದ ಎಂದು ಆರೋಪಿಸಿ ರೈತರು ಓರ್ವನನ್ನು ಹಿಡಿದಿಟ್ಟಿದ್ದರು. ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ವಶಕ್ಕೆ ಪಡೆದಿರುವ 21 ವರ್ಷದ ವ್ಯಕ್ತಿ ಸೋನಿಪತ್ ನಿವಾಸಿ ಎನ್ನಲಾಗಿದ್ದು, ಈ ವ್ಯಕ್ತಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಆತನ ಬಳಿ ಯಾವುದೇ ಆಯುಧ, ಶಸ್ತ್ರಾಸ್ತ್ರಗಳಿರಲಿಲ್ಲ. ಪ್ರತಿಭಟನೆಗೆ ಸಂಚು ರೂಪಿಸಿರುವ ಕುರಿತ ಯಾವುದೇ ಸುಳಿವೂ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.
PublicNext
23/01/2021 04:10 pm