ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಕರ್ಣ: ಸಮುದ್ರದಲ್ಲಿ ಮುಳುಗಿ ಮೂವರು ಬೆಂಗಳೂರಿನ ಪ್ರವಾಸಿಗರ ಸಾವು: ಇಬ್ಬರ ರಕ್ಷಣೆ

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲ ತೀರ ಭಾಗದಲ್ಲಿ ನಡೆದಿದೆ.

ಬೆಂಗಳೂರಿನ ಹೆಬ್ಬಗೋಡಿಯ ತಿರುಪಾಲ್ಯ ಮೂಲದಸುಮ(21), ತಿಪ್ಪೇಶ(20) ಹಾಗೂ ರವಿ(35) ಮೃತ ದುರ್ದೈವಿಗಳು.

16 ಮಂದಿ ದೇವರ ದರ್ಶನಕ್ಕೆ ಗೋಕರ್ಣಕ್ಕೆ ಆಗಮಿಸಿದ್ದರು.ದರ್ಶನದ ನಂತರ ಕಡಲ ತೀರದಲ್ಲಿ ಈಜಲು ತೆರಳಿದಾಗ ಈ ದುರಂತ ಸಂಭವಿಸಿದೆ. ಈ ವೇಳೆ ಮೂರು ಜನ ನೀರಿನಲ್ಲಿ ಕೊಚ್ವಿ ಹೋಗಿದ್ದು, ಉಳಿದ ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

21/01/2021 06:26 pm

Cinque Terre

85.9 K

Cinque Terre

4

ಸಂಬಂಧಿತ ಸುದ್ದಿ