ಮೈಸೂರು: ನೀರಿನ ಸಂಪಿಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ತೆಂಕಲಕೊಪ್ಪಲು ಗ್ರಾಮದ ನಟರಾಜ್ ಅವರ ಮಗ ಮೃತ ದುರ್ದೈವಿ. ಬಾಲಕ ತನ್ನ ಅಕ್ಕನ ಜೊತೆಗೆ ಮನೆಯ ಮುಂದೆ ಆಟವಾಡುತ್ತಿದ್ದ. ಆದರೆ ಅಕ್ಕ ಮನೆಯ ಒಳಗೆ ಹೋಗಿದ್ದಾಗ ಬಾಲಕ ಆಟವಾಡುತ್ತಾ ನಿರ್ಮಾಣ ಹಂತದ ಮನೆಯ ನೀರಿನ ಸಂಪಿಗೆ ಬಿದ್ದಿದ್ದಾನೆ. ಸ್ವಲ್ಪ ಸಮಯದ ಬಳಿಕ ಮಗುವಿನ ಹುಡುಕಾಟ ನಡೆಸಿದಾಗ ಸಂಪಿನಲ್ಲಿ ಮೃತದೇಹ ಪತ್ತೆಯಾಗಿದೆ.
ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಬಿಳಿಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
20/01/2021 09:22 am