ಚಿಕ್ಕಬಳ್ಳಾಪುರ: ಹೆತ್ತ ಮಗುವನ್ನೇ ಮಾರಾಟ ಮಾಡಿ ತಾಯೊಯೊಬ್ಬಳು ಜೈಲು ಪಾಲಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಿವಾಸಿ ಚಂದನಾ ಬಂಧಿತ ತಾಯಿ. ಚಂದನಾ ಚಿಕ್ಕಬಳ್ಳಾಪುರ ತಾಲೂಕಿನ ಹಳ್ಳಿಯೊಂದ ನಿವಾಸಿಯನ್ನು ಮದುವೆಯಾಗಿದ್ದಳು. ಆದರೆ ಮದುವೆಯಾದ ಐದು ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಅನುಮಾನಗೊಂಡ ಪತಿ ಆಕೆಯನ್ನು ತವರುಮನೆಗೆ ಕಳುಹಿಸಿದ್ದಾನೆ.
ತವರಿಗೆ ಬಂದ ಚಂದನಾ ಮಗುವನ್ನು ಬೆಂಗಳೂರಿನ ಬಾಗಲೂರು ಮೂಲದ ಮಲ್ಲೇಶ್- ರೂಪಾ ದಂಪತಿಗೆ ಮಗುವನ್ನು ಮಾರಿದ್ದಾಳೆ. ಈ ಬಗ್ಗೆ ದೂರು ಬರುತ್ತಿದ್ದಂತೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರ ಸಹಾಯದಿಂದ ಮಗುವನ್ನು ರಕ್ಷಿಸಿದ್ದಾರೆ. ಆರೋಪಿ ಚಂದನಾಳನ್ನು ಪೊಲೀಸರು ಬಂಧಿಸಿದ್ದಾರೆ.
PublicNext
20/01/2021 07:34 am