ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Gang Rape ಮಾಡಿ ನೇಣು ಹಾಕಿ ಕೊಂದ ಕಾಮುಕರು

ನವದೆಹಲಿ : ಎಲ್ಲರಂತೆ ಅವಳು ಓದಬೇಕೆನ್ನುವ ಕನಸ್ಸು ಕಂಡ ಯುವತಿ ಕಾಮುಕರ ಕೈಯಲ್ಲಿ ಕಮರಿ ಹೋಗಿದ್ದಾಳೆ.

ಹೌದು ಪಿಯುಸಿ ಓದುತ್ತಿದ್ದ 16 ವರ್ಷದ ಯುವತಿಯ ಮೇಲೆ ರಾಕ್ಷಸರಂತೆ ಎರಗಿದ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ತೃಷೆ ತೀರದ ಬಳಿಕ ನೇಣು ಬೀಗಿದ್ದು ಕೊಲೆ ಮಾಡಿದ್ದಾರೆ.

ತಮ್ಮ ನಿಚ ಕೃತ್ಯ ಬಯಲಾಗುತ್ತದೆ ಎಂಬ ಭಯದಿಂದ ಆಕೆಗೆ ನೇಣು ಹಾಕಿರುವ ಘಟನೆ ಉತ್ತರ ಪ್ರದೇಶದ ಮಹೋಬ ಜಿಲ್ಲೆಯಲ್ಲಿ ನಡೆದಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಶನಿವಾರ ಸಂಜೆ ದಿನಸಿ ತರಲು ಮನೆಯಿಂದ ಹೊರ ಬಂದ ಯುವತಿಯನ್ನು ಎಳೆದೊಯ್ದ ಮೂವರು ಕಾಮುಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆಗೆ ನೇಣು ಬಿಗಿದು ಕೊಂದು, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.

ಹೊರ ಹೋದ ಮಗಳು ಮರಳಿ ಬಾರದಿರಲು ಕಂಗಾಲಾದ ಪಾಲಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ರಸ್ತೆ ಬದಿಯ ಮರದಲ್ಲಿ ಮಗಳ ದೇಹ ನೇತಾಡುತ್ತಿದ್ದುದು ಕಂಡಿತ್ತು.

ಅವರದೇ ಊರಿನ ರೋಹಿತ್, ತರುಣ್, ಭೂಪೇಂದ್ರ ಎಂಬ ಮೂವರು ಪುಂಡರು ಆಕೆಯ ಮೇಲೆ ಕಣ್ಣಿಟ್ಟಿದ್ದರು. ಅವರೇ ಆಕೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಮೃತ ಯುವತಿಯ ತಂದೆ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಹತ್ರಾಸ್ನಲ್ಲಿ 20 ವರ್ಷದ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ 1 ತಿಂಗಳ ಅಂತರದಲ್ಲಿ ಉತ್ತರ ಪ್ರದೇಶದಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ನಡೆದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Edited By : Nirmala Aralikatti
PublicNext

PublicNext

19/01/2021 05:19 pm

Cinque Terre

161.07 K

Cinque Terre

33

ಸಂಬಂಧಿತ ಸುದ್ದಿ