ಬೆಂಗಳೂರು: ವಂಚಕ ಯುವರಾಜ್ ಪುರಾಣದ ಮತ್ತೊಂದು ಅಧ್ಯಾಯ ಬಯಲಾಗಿದೆ. ರಾಧಿಕಾ ಕುಮಾರಸ್ವಾಮಿ, 15+60 ಲಕ್ಷ ಕೇಸ್ ರೋಚಕ ತಿರುವು ಪಡೆದುಕೊಂಡಿದೆ.
"ನಾಟ್ಯ ರಾಣಿ ಶಾಂತಲೆ" ಸಿನಿಮಾದಲ್ಲಿ ನಟಿಸಲು ಒಪ್ಪಿದ್ದೆ. ಯುವರಾಜ್ ಕಡೆಯಿಂದ 75 ಲಕ್ಷ ಬಂದಿತ್ತು. 15 ಲಕ್ಷ ಯುವರಾಜ್ ಕೊಟ್ಟಿದ್ದ 60 ಲಕ್ಷ ಬೇರೆಯವರು ಹಾಕಿದ್ದು. ಕೇಳಿದ್ರೆ ನಮ್ಮ ಭಾವ ಹಾಕಿದ್ದು ಅಂತಾ ಯುವರಾಜ್ ಹೇಳಿದ್ದರು ಎಂದು ರಾಧಿಕಾ ಕುಮಾರಸ್ವಾಮಿ ತಿಳಿಸಿದ್ದರು.
ಇದೇ ಹೇಳಿಕೆ ಆಧರಿಸಿ ತನಿಖೆ ಚುರುಕುಗೊಳಿಸಿದ್ದ ಸಿಸಿಬಿ ಅಧಿಕಾರಿಗಳಿಗೆ ಅಸಲಿ ವಿಚಾರ ಗೊತ್ತಾಗಿದೆ. ರಾಧಿಕಾ ಖಾತೆಗೆ ಹಣ ಹಾಕಿದ್ದು ಯುವರಾಜ್ ಅಲ್ಲ. ಬದಲಾಗಿ ಅವನಿಂದ ಮೋಸ ಹೋಗಿದ್ದ ಮೈಸೂರಿನ ರವಿ.
ಸ್ಲಮ್ ಬೋರ್ಡ್ ಗೆ ಅಧ್ಯಕ್ಷ ಮಾಡ್ತೀನಿ ಅಂತ ರವಿಗೆ ಹೇಳಿದ್ದ ಯುವರಾಜ್ 6 ಕೋಟಿ ಪಡೆದಿದ್ದ ಎನ್ನಲಾಗಿದೆ. ಈ 6ಕೋಟಿಯಲ್ಲಿ 60 ಲಕ್ಷ ಹಣ ನಟಿ ರಾಧಿಕಾ ಖಾತೆಗೆ ವರ್ಗಾವಣೆಯಾಗಿದೆ. 6 ಕೋಟಿ ವಂಚನೆಗೊಳಗಾಗಿದ್ದೇನೆ ಎಂದು ಮೈಸೂರಿನ ರವಿ ಸಿಸಿಬಿ ದೂರು ಕೊಟ್ಟಿದ್ದರು. ಇದೇ ಪ್ರಕರಣದಲ್ಲಿ ರಾಧಿಕಾ ಭಾಗಿ ಆಗಿರಬಹುದು ಎಂದು ಸಿಸಿಬಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಟಿ ರಾಧಿಕಾಗೆ ಕಂಟಕ ಕಾದಿದೆಯಾ ಎಂಬ ಪ್ರಶ್ನೆ ಎದ್ದಿದೆ.
PublicNext
19/01/2021 11:42 am