ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯರಾತ್ರಿ ಬಾರ್ ಕ್ಯಾಶಿಯರ್ ಮೇಲೆ ಅಟ್ಯಾಕ್- ಬೈಕ್‌ನಿಂದ ಕೆಡವಿ 2.5 ಲಕ್ಷ ದೋಚಿದ ಕಳ್ಳರು!

ಬೆಂಗಳೂರು: ಬಾರ್‌ ಕ್ಯಾಶಿಯರ್ ಮೇಲೆ ಮಧ್ಯರಾತ್ರಿ ದಾಳಿ ಮಾಡಿದ ಗ್ಯಾಂಗ್‌ವೊಂದು 2.5 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ರಾಜಾನುಕುಂಟೆ ರಚನಾ ವೈನ್ಸ್ ಕ್ಯಾಶಿಯರ್, ಕ್ಯಾಶ್ ತೆಗೆದುಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿದ 6 ಮಂದಿ ಬೈಕ್ ಬೀಳಿಸಿ ಕ್ಯಾಶಿಯರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೆಡವಿದ್ದಾರೆ. ಬಳಿಕ 2.5 ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳು ಬಾರ್‌ ಕ್ಯಾಶಿಯರ್‌ಗಳನ್ನೇ ಟಾರ್ಗೆಟ್‌ ಮಾಡಿ ದಾಳಿ ನಡೆಸುತ್ತಾರೆ ಎನ್ನಲಾಗಿದೆ. ಸದ್ಯ ಆರೋಪಿಗಳಿಗೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

Edited By : Vijay Kumar
PublicNext

PublicNext

18/01/2021 04:02 pm

Cinque Terre

60.37 K

Cinque Terre

0

ಸಂಬಂಧಿತ ಸುದ್ದಿ