ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರೆದರೂ ಬಾರದ ಹೆಂಡತಿ: ಅತ್ತೆ ಮನೆಗೆ ಬೆಂಕಿ ಹಚ್ಚಿದ ಅಳಿಯ

ಲಕ್ನೋ: ತವರು ಮನೆಗೆ ಹೋದ ಹೆಂಡತಿ ವಾಪಸ್ ಬರಲಿಲ್ಲ ಎಂಬ ಕಾರಣಕ್ಕೆ ಭಂಡ ಗಂಡ ತನ್ನ ಅತ್ತೆಯ ಮನೆಗೆ ಬೆಂಕಿ ಹಚ್ಚಿದ್ದಾನೆ‌. ಈ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ರತ್ತುಪಾರ್ವಾ ಎಂಬಲ್ಲಿ ನಡೆದಿದೆ‌.

ಮನೀಶಾ ಹಾಗೂ ಮುಕೇಶ್ ಪರಸ್ಪರ ಪ್ರೀತಿಸಿ ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮದುವೆ ನಂತರ ಸಹಜ ಮನಸ್ತಾಪಗಳು ಬಂದಿವೆ. ಹೆರಿಗೆ ವೇಳೆ ತವರು ಮನೆಗೆ ಬಂದ ಮನೀಶಾ, ಪತಿ ಹಲ್ಲೆ ಮಾಡುತ್ತಾನೆಂದು ಆರೋಪಿಸಿ ವಾಪಸ್ ಗಂಡನ ಮನೆಗೆ ಹೋಗಿರಲಿಲ್ಲ. ಇದೇ ಕಾರಣಕ್ಕೆ ಆಕ್ರೋಶಗೊಂಡ ಮನೀಶಾಳ ಗಂಡ ಮುಕೇಶ್ ನಿನ್ನೆ ಶುಕ್ರವಾರ ತನ್ನ ಹೆಂಡತಿಯ ತವರು ಮನೆಗೆ ಬಂದು ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದ್ದಾನೆ. ಬೆಂಕಿ ತಗುಲಿದ್ದನ್ನು ಕಂಡ ಸ್ಥಳೀಯರು ಕೂಡಲೇ ಮನೆಯಲ್ಲಿದ್ದವರನ್ನು ಪಾರು ಮಾಡಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಗಂಡ ಮುಕೇಶ್ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

Edited By : Nagaraj Tulugeri
PublicNext

PublicNext

16/01/2021 11:12 am

Cinque Terre

107.15 K

Cinque Terre

4

ಸಂಬಂಧಿತ ಸುದ್ದಿ