ಮುಂಬೈ: ವಿಭಿನ್ನವಾಗಿ ಸೆಕ್ಸ್ ಮಾಡುವ ಬಯಕೆಗೆ ಮುಂದಾಗಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಾವಿಗೆ ಕಾರಣವಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಮಹಿಳೆಗೆ ಮದುವೆಯಾಗಿ ಒಂದು ಮಗು ಕೂಡ ಇದೆ. ಆದರೂ ಮತ್ತೊಬ್ಬ ಪುರುಷನೊಂದಿಗೆ ಸುಮಾರು ಐದು ವರ್ಷದಿಂದ ಸಂಬಂಧ ಹೊಂದಿದ್ದಳು. ಶುಕ್ರವಾರ ಪ್ರಿಯಕರನೊಂದಿಗೆ ಲಾಡ್ಜ್ ಒಂದಕ್ಕೆ ಹೋಗಿದ್ದ ಮಹಿಳೆ ಆತನೊಂದಿಗೆ ಡಿಫರೆಂಟ್ ಸೆಕ್ಸ್ ಬಯಕೆ ವ್ಯಕ್ತಪಡಿಸಿದ್ದಳು. ಅದರಂತೆ ಗೆಳೆಯನನ್ನು ಖುರ್ಚಿ ಮೇಲೆ ಕೂರಿಸಿ ನೈಲಾನ್ ಹಗ್ಗದಿಂದ ಆತನ ಕೈ ಕಾಲುಗಳನ್ನು ಕಟ್ಟಿದ್ದಾಳೆ. ಸ್ವಲ್ಪ ಜಾಸ್ತಿಯೇ ಥ್ರಿಲ್ ಇರಲಿ ಎಂದು ಕುತ್ತಿಗೆಯ ಭಾಗದಲ್ಲೂ ಹಗ್ಗ ಕಟ್ಟಿದ್ದಾಳೆ.
ಬಳಿಕ ಮಹಿಳೆ ಬಾತ್ ರೂಂಗೆ ಹೋಗಿದ್ದಾಳೆ. ಈ ವೇಳೆ ಖುರ್ಚಿ ಸ್ಲಿಪ್ ಕುತ್ತಿಗೆಯಲ್ಲಿದ್ದ ಹಗ್ಗ ಸಿಕ್ಕಿ ಹಾಕಿಕೊಂಡು ಬಿಗಿಯಾಗಿದೆ. ಆತ ತಪ್ಪಿಸಿಕೊಳ್ಳಲೂ ಆಗದೆ ಅಲ್ಲಿಯೇ ನರಳಲಾರಂಭಿಸಿದ್ದಾನೆ. ಬಾತ್ರೂಂನಿಂದ ಹೊರಗೆ ಬಂದ ಮಹಿಳೆಗೆ ಪ್ರಿಯತಮ ನರಳುತ್ತಿರುವ ದೃಶ್ಯ ಕಂಡುಬಂದಿದೆ. ತಕ್ಷಣ ಲಾಡ್ಜ್ನ ಸಿಬ್ಬಂದಿಯನ್ನು ಕರೆದು ಸಹಾಯ ಕೇಳಿದ್ದಾಳೆ. ಆತನ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಬಿಚ್ಚುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯ ವಿಚಾರಣೆ ವೇಳೆ ಸತ್ಯ ಬೆಳಕಿಗೆ ಬಂದಿದೆ.
PublicNext
09/01/2021 06:42 pm