ಬದಾಯೂಂ : ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಷ್ಟೇ ಕಠಿಣ ಕಾನೂನುಗಳನ್ನು ಜಾರಿ ಮಾಡಿದ್ರು ಇಂತಹ ಹೇಯ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಬದಾಯೂಂನಲ್ಲಿ ಥೇಟ್ ನಿರ್ಭಯಾ ಕೇಸ್ ನಂತೆಯೇ 50 ವರ್ಷದ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಈ ಘಟನೆ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಕ್ತಿ ದೇವಿ ಎಲುಬಿಲ್ಲದ ನಾಲಿಗೆಯಿಂದ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಗುರುವಾರ ಸಂತ್ರಸ್ತೆ ಗ್ರಾಮಕ್ಕೆ ಭೇಟಿ ನೀಡಿದ ದೇವಿ, ‘ಸಂತ್ರಸ್ತ ಮಹಿಳೆ ಸಂಜೆ ಹೊತ್ತಲ್ಲಿ ಒಬ್ಬಂಟಿಯಾಗಿ ಮನೆಯಿಂದ ಹೊರಹೋಗದಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ. ಈ ಕೃತ್ಯ ಮಾನವ ಕುಲಕ್ಕೇ ಕಳಂಕ. ಆದರೆ ಮಹಿಳೆಯರು ಸಂಜೆ ವೇಳೆ ಒಬ್ಬೊಂಟಿಯಾಗಿ ಮನೆಯಿಂದ ಆಚೆ ಹೋಗದಂತೆ ನಾನು ಯಾವಾಗಲೂ ಹೇಳುತ್ತಿರುತ್ತೇನೆ’ ಎಂದು ಹೇಳಿದ್ದಾರೆ.
ದೇವಿ ಅವರ ಈ ಬೇಜವಾಬ್ದಾರಿಯುತ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ.
ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಮೇಲೆ ರಾಕ್ಷಸರು ಅತ್ಯಾಚಾರ ಎಸಗಿ ಭಯಾನಕವಾಗಿ ಹಲ್ಲೆ ಮಾಡಿದ್ದರು.
‘ದೇವಾಲಯಕ್ಕೆ ಮಹಿಳೆ ತೆರಳಿದ ಸಂದರ್ಭದಲ್ಲಿ ಅರ್ಚಕ ಹಾಗೂ ಆತನ ಸಹಚರರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಚಂದೌಸಿ ಆಸ್ಪತ್ರೆಗೂ ಕರೆದೊಯ್ದಿದ್ದಾರೆ.
ಚಿಕಿತ್ಸೆ ಫಲಿಸದೇ ಇದ್ದಾಗ ಬಾವಿಯಲ್ಲಿ ಬಿದ್ದು ಸತ್ತಳು ಎಂಬ ‘ಸುಳ್ಳು ಕತೆ’ ಕಟ್ಟಿ ಮನೆಗೆ ದೇಹ ಕೊಟ್ಟು ಹೋಗಿದ್ದಾರೆ’ ಎಂದು ಸಂತ್ರಸ್ತೆಯ ಮಗ ಆರೋಪಿಸಿದ್ದಾನೆ.
PublicNext
09/01/2021 11:17 am