ಬೆಂಗಳೂರು: ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ಹಲವರಿಗೆ ಕೋಟ್ಯಂತರ ರೂ. ವಂಚನೆ ನಡೆಸಿ ಬಂಧಿತನಾಗಿರುವ
ಆರೋಪಿ ಯುವರಾಜ ಅಲಿಯಾಸ್ ಸ್ವಾಮಿ, ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಬ್ಯಾಂಕ್ ಖಾತೆಗೆ 1.25 ಕೋಟಿ ರು. ವರ್ಗಾವಣೆ ಮಾಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯ ಯುವರಾಜ್‌ನ ಸಿನಿಮಾ ನಿರ್ಮಾಣ, ವ್ಯವಹಾರ, ಹಣ ವರ್ಗಾವಣೆ ಸೇರಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಖಾತೆಗೆ ಹಣ ವರ್ಗಾವಣೆಯಾದ ಸಾಕ್ಷ್ಯಾಧಾರ ಸಿಕ್ಕಿರುವ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಸಿಸಿಬಿ ಅಧಿಕಾರಿಗಳು ರಾಧಿಕಾ ಅವರಿಗೆ ನೋಟಿಸ್ ನೀಡಿ ನಾಳೆ ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಹಣ ವರ್ಗಾವಣೆ ಸಂಬಂಧ ಈಗಾಗಲೇ ರಾಧಿಕಾ ಸಹೋದರ ರವಿರಾಜ್‌ನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಬರಬೇಕಾಗುತ್ತದೆ ಎಂದು ಸೂಚಿಸಿದ್ದಾರೆ. ರಾಧಿಕಾ ಖಾತೆಗೆ ಹಣ ಜಮೆಯಾಗಿರುವ ಹಿನ್ನೆೆಲೆ ಯಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿದೆ.
PublicNext
07/01/2021 10:04 pm