ಪಾಟ್ನಾ: ಅಂತ್ಯಸಂಸ್ಕಾರಕ್ಕೆ ಹಣ ನೀಡಲು ಆಗ್ರಹಿಸಿ ಗ್ರಾಮಸ್ಥರು ರೈತರೊಬ್ಬರ ಶವವನ್ನೇ ಬ್ಯಾಂಕ್ಗೆ ತೆಗೆದುಕೊಂಡು ಹೋದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಮಹೇಶ್ ಯಾದವ್ (55) ಮೃತ ರೈತ. ಮಹೇಶ್ ಅವರಿಗೆ ಯಾರೂ ಇರಲಿಲ್ಲ. ಅನೇಕ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಮಂಗಳವಾರ ಮೃತಪಟ್ಟಿದ್ದು, ತಡವಾಗಿ ವಿಚಾರ ಗೊತ್ತಾಗಿದೆ. ಗ್ರಾಮಸ್ಥರು ಮಹೇಶ್ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು. ಆದರೆ ಯಾರೊಬ್ಬರೂ ಹಣ ನೀಡಲು ಸಿದ್ಧರಿರಲಿಲ್ಲ. ಹೀಗಾಗಿ ಈ ರೈತನ ಮನೆಯಲ್ಲಿ ಏನಾದರೂ ಬೆಲೆ ಬಾಳುವ ವಸ್ತು ಇದೆಯೇ ಎನ್ನುವುದನ್ನು ಹುಡುಕಿದ್ದಾರೆ. ಈ ವೇಳೆ ಬ್ಯಾಂಕ್ ಪಾಸ್ಬುಕ್ ನೋಡಿದಾಗ ಮಹೇಶ್ ಖಾತೆಯಲ್ಲಿ 1.17 ಲಕ್ಷ ರೂ. ಇರುವುದು ಗ್ರಾಮಸ್ಥರಿಗೆ ಗೊತ್ತಾಗಿದೆ.
ಬ್ಯಾಂಕ್ಗೆ ತೆರಳಿದಾಗ ಹಣ ನೀಡೋಕೆ ಬ್ಯಾಂಕ್ ಮ್ಯಾನೆಜರ್ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಶವವನ್ನು ಹೊತ್ತು ಬ್ಯಾಂಕ್ಗೆ ತೆರಳಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಹಣ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಸ್ಥಳೀಯ ಪೊಲೀಸರ ಸೂಚನೆ ಮೇರೆಗೆ ಬ್ಯಾಂಕ್ ಮ್ಯಾನೆಜರ್ ಹಣ ನೀಡಿದ್ದಾರೆ ಎಂದು ವರದಿಯಾಗಿದೆ.
PublicNext
07/01/2021 07:54 pm