ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಜ್‌ಮಹಲ್‌ ಆವರಣದಲ್ಲಿ ಕೇಸರಿ ಬಾವುಟ ಹಾರಿಸಿದ ನಾಲ್ವರು ಅರೆಸ್ಟ್

ಲಕ್ನೋ: ಆಗ್ರಾದ ವಿಶ್ವವಿಖ್ಯಾತ ತಾಜ್‌ಮಹಲ್‌ ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದ ಹಿಂದೂ ಸಂಘಟನೆಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾಗಿರುವ ಹಿಂದೂ ಜಾಗರಣ ಮಂಚ್‌ನ ಯುವ ವಿಭಾಗದ‌ ಜಿಲ್ಲಾಧ್ಯಕ್ಷ ಗೌರವ್ ತಲ್ವಾರ್ ಮತ್ತು ಕಾರ್ಯಕರ್ತರಾದ ರಿಷಿ ಲವಾನಿಯಾ, ಸೋನು ಭಗೇಲ್ ಹಾಗೂ ವಿಶೇಷ್ ಕುಮಾರ್‌ ಬಂಧಿತರು. ಈ ನಾಲ್ವರು ತಾಜ್‌ ಮಹಲ್‌ ಆವರಣದಲ್ಲಿ ಧ್ವಜ ಹಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಭದ್ರತಾ ದಳದ ಮುಖ್ಯಸ್ಥ ರಾಹುಲ್‌ ಯಾದವ್‌, “ಆರೋಪಿಗಳು ಯೂಟ್ಯೂಬ್‌ನಲ್ಲಿ ತಮ್ಮ ವಿಡಿಯೋ ಹೆಚ್ಚು ವೀಕ್ಷಣೆಯಾಗಲಿ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ. ತಾಜ್‌ಮಹಲ್‌ ಪ್ರವೇಶ ದ್ವಾರದಲ್ಲಿ ಲೋಹ ಪತ್ತೆಹಚ್ಚುವ ವ್ಯವಸ್ಥೆಯಿದೆ. ಆದರೆ ಸಣ್ಣ ಬಟ್ಟೆ ತುಂಡುಗಳು ಇದರಲ್ಲಿ ದಾಖಲಾಗುವುದಿಲ್ಲ. ಇನ್ನು ಸೆಲ್ಫಿ ಸ್ಟಿಕ್‌ಗಳನ್ನು ಆವರಣಕ್ಕೆ ತರಲು ಅನುಮತಿ ನೀಡಲಾಗಿದೆ. ಹೀಗಾಗಿ ಆರೋಪಿಗಳು ಸೆಲ್ಫೀ ಸ್ಟಿಕ್‌ ಬಳಸಿ ಬಾವುಟ ಹಾರಿಸಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

05/01/2021 07:27 pm

Cinque Terre

163.23 K

Cinque Terre

31

ಸಂಬಂಧಿತ ಸುದ್ದಿ