ನವದೆಹಲಿ: ವಿಕೃತ ಕಾಮುಕರು ರಸ್ತೆಯಲ್ಲೇ ತಾಯಿ ಹಾಗೂ ಮಗಳ ಮೇಲೆ ಅತ್ಯಾಚಾರ ಎಸಗಿದ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.
ಸಂತ್ರಸ್ತ ತಾಯಿ 35 ವರ್ಷದವರು ಹಾಗೂ ಮಗಳು 18 ವರ್ಷದವರು ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಲಾಕ್ಡೌನ್ ವೇಳೆಯಲ್ಲಿ ಊರಿಗೆ ತೆರಳಿ ಅಲ್ಲಿಯೇ ವಾಸಿಸುತ್ತಿದ್ದಾನೆ. ಹೀಗಾಗಿ ನಗರದಲ್ಲೇ ಉಳಿದ ಮಹಿಳೆ ಮತ್ತು ಆಕೆಯ ಮಗಳು ಚಿಂದಿ ಆಯ್ದು ಜೀವನ ನಡೆಸುತ್ತಿದ್ದರು. ಆದರೆ ಡಿಸೆಂಬರ್ 29ರ ರಾತ್ರಿ ಮದ್ಯದ ಮತ್ತಿನಲ್ಲಿದ್ದ ಕಾಮುಕ ಇಬ್ಬರು ಯುವಕರು ರಸ್ತೆ ಬದಿಯಲ್ಲಿದ್ದ ತಾಯಿ-ಮಗಳ ಮೇಲೆ ದಾಳಿ ನಡೆಸಿ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ರಕ್ಷಣೆಗೆ ಮುಂದಾಗುವ ಬದಲು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಕಾಮುಕರ ವಿರುದ್ಧ ಸಂತ್ರಸ್ತ ತಾಯಿ-ಮಗಳು ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ನೋಡಿ ಪೊಲೀಸರೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋದಲ್ಲಿದ್ದ ಆರೋಪಿಗಳನ್ನು ಗುರುತಿಸಿ ಅವರನ್ನು ಭಾನುವಾರದಂದು ಬಂಧಿಸಲಾಗಿದೆ.
PublicNext
04/01/2021 07:05 pm