ಚಿಕ್ಕಬಳ್ಳಾಪುರ: ಯುವಕನೊರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದು ತೋಟದಲ್ಲಿ ಎಸೆದು ಹೋದ ಘಟನೆ ಗೌರಿಬಿದನೂರು ಹೊರವಲಯದಲ್ಲಿರುವ ದರ್ಗಾ ಬಳಿ ನಡೆದಿದೆ.
ಇಮ್ರಾನ್ ಖಾನ್(25) ಕೊಲೆಯಾದ ಯುವಕ. ಇಮ್ರಾನ್ ಖಾನ್ ಗೌರಿಬಿದನೂರು ನಗರದ ಕೆಎಸ್‍ಆರ್ ಟಿಸಿ ಡಿಪೋ ಬಳಿ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದ. ಆದರೆ ಆತನ ಶವ ಶಶಿಭೂಷಣ್ ಎಂಬವರ ತೋಟದಲ್ಲಿ ಇಂದು ಪತ್ತೆಯಾಗಿದೆ. ಸ್ಥಳಕ್ಕೆ ಗೌರಿಬಿದನೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಕೊಲೆಗೆ ಸರಿಯಾದ ಕಾರಣ ತಿಳಿದುಬಂದಿಲ್ಲ.
PublicNext
04/01/2021 01:09 pm