ರಾಯ್ಪುರ : ಇತ್ತೀಚೆಗೆ ರೋಡ್ ರೋಮಿಯೋಗಳು ಹೆಚ್ಚಾಗಿದ್ದಾರೆ. ಹೀಗೆ ರಸ್ತೆಯಲ್ಲಿ ನಿಂತು ಹುಡುಗಿಯರನ್ನ ಪೀಡಿಸುತ್ತಿದ್ದ ರೋಡ್ ರೋಮಿಯೋಗೆ ಯುವತಿಯೊಬ್ಬಳು ಚಪ್ಪಲಿ ಏಟು ನೀಡಿರುವ ಘಟನೆ ಸೋಮನಗರದಲ್ಲಿ ನಡೆದಿದೆ.
ಸೋಮನಗರದ ದೇವಸ್ಥಾನಕ್ಕೆ ಬಂದಿದ್ದ ಯುವತಿ ಪೂಜೆ ಬಳಿಕ ಮನೆಯತ್ತ ಹೊರಟಿದ್ದಳು. ರಸ್ತೆ ಪಕ್ಕ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಸ್ಥಳೀಯ ನಿವಾಸಿ ಲೋಕೇಶ್ ಠಾಕೂರ್, ಯುವತಿಯನ್ನ ಕೆಟ್ಟ ಪದ ಬಳಸಿ ಕಿರುಕುಳ ನೀಡಿದ್ದಾನೆ.
ಇದೇ ವೇಳೆ ಯುವತಿ ರೋಡ್ ರೋಮಿಯೋನನ್ನ ತಡೆದು ಪ್ರಶ್ನೆ ಮಾಡಿದ್ದಾಳೆ. ಇಷ್ಟಕ್ಕೂ ಸುಮ್ಮನಾಗದ ಲೋಕೇಶ್ ಮತ್ತೆ ಕೆಟ್ಟ ಪದಗಳಿಂದ ಯುವತಿಯನ್ನ ಚೇಡಿಸಿದ್ದಾನೆ.
ನಂತರ ಯುವತಿ ಕಾಲರ್ ಪಟ್ಟಿ ಹಿಡಿದು ಚಪ್ಪಲಿಯಿಂದ ಥಳಿಸಿದ್ದಾಳೆ.
ಕೆಲ ಸ್ಥಳೀಯರು ಸಹ ಪುಂಡನಿಗೆ ಧರ್ಮದೇಟು ನೀಡಿದ್ದಾರೆ. ಏಟು ಬೀಳುತ್ತಿದ್ದಂತೆ ಅಕ್ಕ ತಪ್ಪಾಯ್ತ ಎಂದು ಕ್ಷಮೆ ಕೇಳಿದ್ದಾನೆ.
ಜನ ಸೇರುತ್ತಿದ್ದಂತೆ ಲೋಕೇಶ್ ಬೈಕ್ ಏರಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
PublicNext
03/01/2021 04:43 pm