ಲಕ್ನೋ: ಸ್ಮಶಾನವೊಂದರ ಆವರಣದ ಗೋಡೆ ಕುಸಿದು ಐವರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಅವಶೇಷದಡಿ ಸಿಲುಕಿದ ಭಾರೀ ದುರಂತ ದೆಹಲಿ-ಉತ್ತರ ಪ್ರದೇಶ ಗಡಿ ಪ್ರದೇಶವಾದ ಗಾಜಿಯಾಬಾದ್ನಲ್ಲಿ ನಡೆದಿದೆ.
ಗಾಜಿಯಾಬಾದ್‌ನ ಮುರಾದ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಂಬಾ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಈ ದುರಂತ ಸಂಭವಿಸಿದೆ. ದುರಾದೃಷ್ಟವಶಾತ್ ಈ ವೇಳೆ ಅಂತ್ಯಸಂಸ್ಕಾರಕ್ಕೆಂದು ನೂರಾರು ಜನರ ಗುಂಪು ಅಲ್ಲಿಗೆ ಬಂದಿತ್ತು. ಪರಿಣಾಮ ಭಾರೀ ಅನಾಹುತವೇ ಸಂಭವಿಸಿದೆ.
ಸ್ಥಳೀಯರು ಎನ್ಡಿಆರ್ಎಫ್ ತಂಡದೊಂದಿಗೆ ಹಾಗೂ ಪೊಲೀಸರು ಕೈಜೋಡಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೆಲವನ್ನು ರಕ್ಷಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ಮೃತಪಟ್ಟಿದ್ದಾರೆ.
PublicNext
03/01/2021 03:17 pm