ಲಕ್ನೋ: ಉತ್ತರ ಪ್ರದೇಶ ಜಾರಿಗೆ ತಂದ ಮತಾಂತರ ವಿರೋಧಿ ಕಾನೂನು ದುರ್ಬಳಕೆಯಾಗುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಹೌದು. ಉತ್ತರ ಪ್ರದೇಶದ ಬರೇಲಿಯಲ್ಲಿ 22 ವರ್ಷದ ವಿವಾಹಿತ ಮಹಿಳೆಯೊಬ್ಬಳು ಮುಸ್ಲಿಂ ಪುರುಷ ಮತ್ತು ಆತನ ಇಬ್ಬರು ಸೋದರಸಂಬಂಧಿಗಳ ವಿರುದ್ಧ ನಕಲಿ ದೂರು ದಾಖಲಿಸಿ ಸಿಕ್ಕಿಬಿದ್ದಿದ್ದಾಳೆ.
ಮಹಿಳೆ ಆರೋಪದ ಪ್ರಕಾರ, ಡಿಸೆಂಬರ್ 1ರಂದು ಗನ್ ಪಾಯಿಂಟ್‌ನಲ್ಲಿ ಇರಿಸಿ ತನ್ನನ್ನು ಮತಾಂತರಗೊಳಿಸಿ ಮದುವೆಯಾಗಲು ಆರೋಪಿ ಕೇಳಿಕೊಂಡಿದ್ದ ಎಂದು ಹೇಳಿಕೊಂಡಿದ್ದಾಳೆ. ಆದರೆ ಪೊಲೀಸರು, ಆ ದಿನ ಮೂವರು ಆರೋಪಿಗಳು ಬರೇಲಿಯಲ್ಲಿ ಇರಲಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿ ಮಹಿಳೆ ಸುಳ್ಳು ಆರೋಪ ಮಾಡಿರುವುದು ಬೆಳಕಿಗೆ ಬಂದಿದೆ.
PublicNext
03/01/2021 02:41 pm