ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದಲ್ಲಿ ಆಸ್ತಿ ಖರೀದಿಸಿ ಖಾಯಂ ನಿವಾಸಿಯಾದ ಪಂಜಾಬ್‌ ವ್ಯಕ್ತಿ ಉಗ್ರರ ಗುಂಡಿಗೆ ಬಲಿ

ಶ್ರೀನಗರ್: ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕಣಿವೆ ರಾಜ್ಯದಲ್ಲಿ ಆಸ್ತಿ ಖರೀದಿಸಲು ಅವಕಾಶ ಕಲ್ಪಿಸಿದೆ. ಕೆಲವರು ಈಗಾಗಲೇ ಇಲ್ಲಿ ಆಸ್ತಿ ಖರೀದಿಸಿ ಖಾಯಂ ನಿವಾಸಿಗಳಾಗಿದ್ದಾರೆ. ಆದರೆ ಖಾಯಂ ನಿವಾಸಿ ಹಕ್ಕು ಪಡೆದ ಪಂಜಾಬ್ ವ್ಯಕ್ತಿಯನ್ನ ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದಾರೆ.

ಪಂಜಾಬ್ ಮೂಲದ ಚಿನ್ನದ ವ್ಯಾಪಾರಿ ಸತ್ಪಾಲ್ ನಿಶ್ಚಲ್ (65) ಉಗ್ರರ ಗುಂಡೇಟಿಗೆ ಬಲಿಯಾಗಿದವರು. ಸತ್ಪಾಲ್ ಅವರು ನಾಲ್ಕು ದಶಕಗಳಿಂದ ಶ್ರೀನಗರದಲ್ಲಿ ನೆಲೆಸಿದ್ದಾರೆ. ಇಲ್ಲಿನ ಸರೈಬಾಲಾ ಮತ್ತು ಹರಿಸಿಂಗ್ ಹೈ ಸ್ಟ್ರೀಟ್ ಮಾರುಕಟ್ಟೆ ಪ್ರದೇಶಗಳಲ್ಲಿ ಅನೇಕ ಕಾಶ್ಮೀರೇತರ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದಾರೆ. ಹೊಸ ಕಾನೂನಿನ ಪ್ರಕಾರ ಇವರಿಗೆ ಕಾಶ್ಮೀರದಲ್ಲಿ ಖಾಯಂ ನಿವಾಸಿಯಾಗುವ ಅವಕಾಶ ಇದೆ. ಇದನ್ನು ಸ್ಥಳೀಯ ಕಾಶ್ಮೀರಿಗಳ ಕೆಲ ಗುಂಪುಗಳು ಬಲವಾಗಿ ವಿರೋಧಿಸುತ್ತಿವೆ.

Edited By : Vijay Kumar
PublicNext

PublicNext

02/01/2021 03:57 pm

Cinque Terre

69.95 K

Cinque Terre

6

ಸಂಬಂಧಿತ ಸುದ್ದಿ