ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆತ್ ನೋಟ್ ಬರೆದು ಪಿಎಸ್ಐ ಆತ್ಮಹತ್ಯೆ

ಲಕ್ನೋ: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಮಹಿಳಾ ಸಬ್ ಇನ್ಸ್ಪೆಕ್ಟರ್ ಒಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

30 ವರ್ಷ ವಯಸ್ಸಿನ ಆರ್ಜೂ ಪವಾರ್ ಎಂಬುವವರೇ ಘಟನೆಯಲ್ಲಿ ಮೃತಪಟ್ಟ ಇನ್ಸ್ಪೆಕ್ಟರ್ ಆಗಿದ್ದಾರೆ. ಇವರು 2015ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಅನೂಪ್ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು. ಬಾಡಿಗೆ ಮನೆಯಲ್ಲಿದ್ದ ಇವರು ಅಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರ್ಜೂ ಅವರ ಮನೆಯಲ್ಲಿ ಡೆತ್ ನೋಟ್ ಸಹ ಲಭ್ಯವಾಗಿದೆ. ಈ ಡೆಟ್ ನೋಟ್ ನಲ್ಲಿ ಇರುವ ವಿಷಯವನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ

Edited By : Nagaraj Tulugeri
PublicNext

PublicNext

02/01/2021 03:12 pm

Cinque Terre

38.15 K

Cinque Terre

0

ಸಂಬಂಧಿತ ಸುದ್ದಿ