ಮನಾತು(ಜಾರ್ಖಂಡ್): ನಕ್ಸಲ್ ಪೀಡಿತ ಪ್ರದೇಶವಾದ ಮನಾತು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಡಿಲ್‌ಪುರದಲ್ಲಿ ಓರ್ವ ನಕ್ಸಲ್ ಹಾಗೂ ಆತನ ಪತ್ನಿ ಯನ್ನು ಹತ್ಯೆ ಮಾಡಲಾಗಿದೆ. ಭೂ ವಿವಾದದ ಹಿನ್ನೆಲೆ ಈ ಘಟನೆ ನಡೆದಿದೆ.
ಈ ಸ್ಥಳವು ಬಿಹಾರ – ಜಾರ್ಖಂಡ್ ಗಡಿ ಭಾಗದಲ್ಲಿದ್ದು, ಇಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿವೆ. ಭೂ ವಿವಾದವೊಂದರಲ್ಲಿ ಗ್ರಾಮಸ್ಥರು ನಕ್ಸಲ್ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದು, ಬಳಿಕ ಆತನ ಹೆಂಡತಿಯನ್ನು ಹೊಡೆದು ಕೊಂದಿದ್ದಾರೆ. ಘಟನೆಯನ್ನು ದೃಢೀಕರಿಸಿದ ಎಸ್ಪಿ ಸಂಜೀವ್ ಕುಮಾರ್, ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.
PublicNext
02/01/2021 12:48 pm