ಬೆಳಗಾವಿ: ಪ್ರೀತಿಗೆ ಅಡ್ಡ ಬಂದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ ಕೊಲೆಗೆ ಯತ್ನಿಸಿದ ಭಗ್ನ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.
26 ವರ್ಷ ವಯಸ್ಸಿನ ವಿನಾಯಕ ಸೋಮಶೇಖರ ಹೊರಕೇರಿ ಎಂಬಾತನೇ ಬಂಧಿತನಾದ ಆರೋಪಿ. ಈತ ಕಳೆದ ಡಿಸೆಂಬರ್ 16ರಂದು ಜಿಲ್ಲೆಯ ಯಮಕನಮರಡಿಯಲ್ಲಿ ಭರಮಾ ದುಪದಾಳೆ ಮೇಲೆ ಗುಂಡಿನ ದಾಳಿ ಮಾಡಿದ್ದ.
ಶೂಟೌಟ್ ಆರೋಪಿ ವಿನಾಯಕ ಯುವತಿಯೊಬ್ಬಳನ್ನು ಲವ್ ಮಾಡಿದ್ದ. ಈ ಲವ್ ವಿಷಯ ತಿಳಿದ ಯುವತಿಯ ದೂರದ ಸಂಬಂಧಿಯಾಗಿದ್ದ ಭರಮಾ ದುಪದಾಳೆ, ಯುವತಿಗೆ ಬೇರೆ ಮದುವೆ ನಿಶ್ಚಯಿಸಿದ್ದರು. ಇದರಿಂದ ಸಿಟ್ಟಿಗೆದ್ದ ಪಾಗಲ್ ಪ್ರೇಮಿ ವಿನಾಯಕ ತಾನು ಪ್ರೀತಿಸಿದ ಹುಡುಗಿಯನ್ನು ಸಂಪರ್ಕಿಸಲು ಬಿಡದ ಭರಮಾ ಮೇಲೆ ಗುಂಡು ಹಾರಿಸಿದ್ದ. ಆದ್ರೆ ಭರಮಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
PublicNext
02/01/2021 08:24 am